ಹುಕ್ಕೇರಿ ಪಟ್ಟಣದಲ್ಲಿ ತಾಲೂಕ ಪಂಚಾಯತ ಸಭಾ ಭವನದಲ್ಲಿ ಗಣೇಶ್ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆ ನಡೆಸಲಾಯಿತು ತಶೀಲ್ದಾರ್ ಮಂಜುಳಾ ನಾಯಿಕ್ ಹಾಗೂ ಡಿ. ವಾಯ್. ಎಸ್ ಪಿ. ಡಿ.ಎಚ್ ಮುಲ್ಲಾ ಗೋಕಾಕ್, ಪಿ. ಐ. ಮಹಾಂತೇಶ್ ಬಸಾಪುರೆ ಇವರ ನೇತೃತ್ವದಲ್ಲಿ ಶಾಂತತಾ ಸಭೆ ನಡೆಸಲಾಯಿತು.
ಗಣೇಶ್ ಚತುರ್ಥಿ ಹಬ್ಬವನ್ನು 7/09/2024 ರಂದು ಶನಿವಾರ ಪ್ರಾರಂಭವಾಗುವುದು ಗಣೇಶ್ ಸ್ಥಾಪನೆ ಮಾಡುವವರು ( ಮಂಡಳ, ಕಮಿಟಿ ವತಿಯಿಂದ ಗಣೇಶ್ ಮಂಟಪದಲ್ಲಿ ಕಡ್ಡಾಯವಾಗಿ ಯಾರಾದರೂ ಒಬ್ಬರು ಇರಲೇ ಬೇಕು ಇದು ಕಮಿಟಿಯವರ ಜವಾಬ್ದಾರಿಯಾಗಿರುತ್ತದೆ.
ಹಿಂದೂ ಸಮಾಜದ ಮುಖಂಡರು ಹಾಗೂ ಹನ್ನೊಂದು ಜಮಾತದ ಮುಖಂಡರು ಸೇರಿ ಸಭೆಯಲ್ಲಿ ಭಾಗವಹಿಸಿದರು ಈದ್ ಮಿಲಾದ್ ಹಬ್ಬ ಹಾಗೂ ಗಣೇಶ್ ಚತುರ್ಥಿ ಹಬ್ಬವು ಒಟ್ಟಿಗೆ ಬಂದಿರುವುದರಿಂದ ಎಲ್ಲರೂ ಕೂಡಿ ಶಾಂತಿಯುತವಾಗಿ ಎರಡು ಹಬ್ಬವನ್ನು ಆಚರಿಸಲಾಗುವುದು ಎಂದು ಹಿಂದೂ ಮತ್ತು ಮುಸ್ಲಿಂ ಭಾಂದವರೊಂದಿಗೆ ಯಾವುದೇ ಕೋಮು ಗಲಭೆ ಹಾಗೂ ದುರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಮುಖಂಡರಲ್ಲಿ ಸಭೆಯಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ
ಅಪ್ಪಣ್ಣ ಪಾಟೀಲ್, ಮಹಾವೀರ್ ನೀಲಜಗಿ, ಮೊಮೀನ್ ದಾದಾ, ಸಲೀಮ್ ನದಾಫ್, ಜೈ ಗೌಡ ಪಾಟೀಲ್, ಗುರುಕುಲಕರ್ಣಿ ಗವಿಶ ವರದಿ ಹಾಗೂ ಹುಕ್ಕೇರಿ ಪಟ್ಟಣದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ ಸದಾನಂದ ಎಂ.ಹೆಚ್