ಹಿರಿಯ ಶಿಕ್ಷಣ ಪ್ರೇಮಿ
ಮಾಣಕಪ್ಪ ಗಾದಾ
ಕಲ್ಯಾಣ ಕರ್ನಾಟಕ
ಗಡಿನಾಡಿನ ಬೀದರ ಜಿಲ್ಲೆಯ
ಜಯಸಿಂಹ ನಗರದ
ಶಿಕ್ಷಣ ಕ್ರಾಂತಿಯ ಹರಿಕಾರರು
ಹಿರಿಯ ಮಾಣಿಕಪ್ಪ ಗಾದಾ
ಸರಳದ ಭಾವನೆಗಳು
ಆಧ್ಯಾತ್ಮಿಕ ಜೀವಿ
ನಿಷ್ಠಾವಂತ ಕಾಯಕ
ಸಮಾಜಕ್ಕೆ ಪ್ರೇಮಿಗಳು
ಇವರ ಅದ್ಭುತ ಮಕ್ಕಳು
ಶಿಕ್ಷಣದ ಜ್ಞಾನಿವಂತರು
ಸಂಸ್ಕೃತಿ ಸಂಸ್ಕಾರದ
ಸಮಾಜಕ್ಕೆ ಪ್ರೇಮಿಗಳು
ಆರೋಗ್ಯದ ಜೀವನ
ನೂರು ವರ್ಷದ ಬದುಕು
ಯೋಗಾಸನದ ಸನ್ಮಾರ್ಗ
ಆಯುಷು ಆನಂದ ಬೆಳಕು
ಹಲವಾರು ಶಿಕ್ಷಣ ಸಂಸ್ಥೆ
ಶಾಲೆ ನಿಷ್ಠಾವಂತ ಶಿಕ್ಷಕರು
ಸನ್ಮಾರ್ಗ ನೀಡಿದ ಮಕ್ಕಳಿಗೆ
ದೇಶಕ್ಕೆ ಬೆಳಕು ತೋರಿಸಿದವರು
ಸಾವಿರಾರು ಮಕ್ಕಳು ಬುದ್ಧಿವಂತರು
ಜ್ಞಾನಿವಂತರು ವಿದ್ವಾಂಸರ ಪಂಡಿತರು
ಬದುಕು ಜೀವನ ಸಾಧನೆ ಯವರು
ವಿಶ್ವಕ್ಕೆ ಬೆಳದಿಂಗಳು ಬೆಳಕಾದವರು
ಹಲವಾರು ವಿದ್ಯಾರ್ಥಿಗಳ ಸಾಧನೆ
ಶಿಕ್ಷಣದ ಜ್ಞಾನ ಭಂಡಾರ
ಬದುಕು ಬಲು ಬಂಗಾರ
ಸಂಸಾರ ಜೀವನ ಉದ್ಧಾರ
ಅತ್ತ ಇತ್ತ ಎತ್ತ ನೋಡಿದರು
ಶ್ರೀ ವಿವೇಕಾನಂದ ಸಂಸ್ಥೆಯ ಮಕ್ಕಳು
ಶಿಕ್ಷಣದ ಜ್ಞಾನ ಪಂಡಿತರು
ಸಮಾಜದ ಶಿಕ್ಷಣದ ಗೆದ್ದವರು
ಗಾಧಾ ಮುಪ್ಪ ಜೀವನದ
ಉಸಿರಾಡುವ ಕೊನೆತನಕ
ಶಿಕ್ಷಣದ ಅನುಭವದ ಪಾಠದ
ಶಿಕ್ಷಣ ಸಂಸ್ಥೆ ಅಮರವಾಯಿತು ಸಾಕ್ಷಾತ್ಕಾರ
– ಕರ್ನಾಟಕ ರಾಜ್ಯ ಬರಹಗಾರರ ಸಂಘ ಬೀದರ್
ಜಿಲ್ಲಾಧ್ಯಕ್ಷರಾದ ಸಾಹಿತಿ
ಶ್ರೀ ವಿಜಯ ಕುಮಾರ ಚಟ್ಟಿ
