ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು

ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರ ನಿರ್ಮಿಸಬೇಕೆಂದಿದ್ದ ಇಸ್ರೇಲ್ ನ ರಕ್ಷಣಾ ಸಚಿವನಿಗೆ ಕೊನೆಗೂ ಬಿತ್ತು ಪೆಟ್ಟು: ಬೀಚ್ ನಲ್ಲಿ ಮಿನಿಸ್ಟರ್ ಅನ್ನು ಅಟ್ಟಾಡಿಸಿ ಓಡಿಸಿದ ಜನ್ರು

ಕೊಲೆಪಾತಕಿ ಈ ಬೀಚಿಗೆ ಹೇಗೆ ಬಂದ, ಆತನನ್ನು ಹೊರಹಾಕಿ ಎಂದು ಹೇಳಿ ಟೆಲ್ ಅವಿವ್ ನ ಬೀಚಿನಲ್ಲಿ ಇದ್ದ ಜನರು ಇಸ್ರೇಲ್ ನ ರಕ್ಷಣಾ ಸಚಿವ ಮತ್ತು ತೀವ್ರ ಬಲಪಂಥೀಯ ರಾಜಕಾರಣಿ ಇತಾಮರ್ ಬಿನ್ ಗಿವರ್ ಅವರನ್ನು ಹೊರ ಹಾಕಿರುವ ಸುದ್ದಿ ಬಹಿರಂಗವಾಗಿದೆ. ಫೆಲೆಸ್ತೀನಿಯರ ಜನಾಂಗೀಯ ಹತ್ಯೆಯಲ್ಲಿ ಈ ವ್ಯಕ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ ಅಕ್ಸ ಮಸೀದಿಯಲ್ಲಿ ಯಹೂದಿ ಮಂದಿರವನ್ನು ನಿರ್ಮಿಸಬೇಕು ಎಂದು ಇತ್ತೀಚಿಗೆ ಇವರು ಕರೆ ಕೊಟ್ಟಿದ್ದರು.

 

ಬೆನ್ ಗಿವರ್ ಮತ್ತು ಅವರ ಕುಟುಂಬ ಬೀಚಿಗೆ ಬಂದಿತ್ತು. ಇದನ್ನು ಕಂಡ ಬೀಚಿನಲ್ಲಿ ಇದ್ದ ಇತರರು ಅವರ ಜೊತೆ ಆಕ್ರೋಶದಿಂದ ಮಾತಾಡುತ್ತಿರುವ ದೃಶ್ಯಗಳನ್ನು ಇಸ್ರೇಲ್ ಮಾಧ್ಯಮಗಳೇ ಬಿಡುಗಡೆಗೊಳಿಸಿವೆ

ನೀವು ಓರ್ವ ಕೊಲೆಪಾತಕಿಯಾಗಿದ್ದೀರಿ.

 

ಉಗ್ರವಾದಿಯಾಗಿದ್ದೀರಿ. ಹಮಾಸ್ ಒತ್ತೆಯಲ್ಲಿಟ್ಟುಕೊಂಡಿರುವ ಇಸ್ರೇಲಿಗರು ಗಾಝಾದಲ್ಲಿ ಸಾಯುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ನೀವು ಸಮುದ್ರ ತೀರದಲ್ಲಿ ನಡೆಯಲು ಬಂದಿದ್ದೀರಲ್ಲ ನಿಮಗೆ ಈ ಧೈರ್ಯ ಎಲ್ಲಿಂದ ಬಂತು ಎಂದು ಇಸ್ರೇಲಿಯನ್ನರು ಆಕ್ರೋಶದಿಂದ ಬೆನ್ ಗಿವರ್ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

 

ಈ ನಡುವೆ ಬೆನ್ ಗಿವರ್ ಅವರ ವಿರುದ್ಧ ಮಹಿಳೆ ಮರಳನ್ನು ಎತ್ತಿ ಎಸೆಯುವುದು ಕೂಡ ವಿಡಿಯೋದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಹಿಳೆಯನ್ನು ಬಂಧಿಸಲಾಗಿದೆ. ಈ ಬೆಳವಣಿಗೆಯ ಬಳಿಕ ಬೆನ್ ಗಿವರ್ ಅವರು ಬೀಚ್ ನಿಂದ ಹೊರ ಬಂದಿದ್ದಾರೆ. ಇದೇ ವೇಳೆ ಕೆಲವರು ಅವರ ಜೊತೆ ಫೋಟೋ ತೆಗೆಯುವುದಕ್ಕೆ ಹತ್ತಿರ ಬರುವುದು ಕೂಡ ವಿಡಿಯೋದಲ್ಲಿದೆ.

 

ವರದಿ : ಸದಾನಂದ

error: Content is protected !!