ಬಸವಕಲ್ಯಾಣದಲ್ಲಿ 68ನೇ ಧಮ್ಮ ಚಕ್ರ ಪರಿವರ್ತನ ದಿನದ ನಿಮಿತ್ಯ ಧಮ್ಮ ರಥಯಾತ್ರೆಗೆ ಚಾಲನೆ ನೀಡಿದ ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್

ಬಸವಕಲ್ಯಾಣ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ 68ನೇ ಧಮ್ಮ ಚಕ್ರ ಪರಿವರ್ತನ‌ ದಿನದ ಪ್ರಯುಕ್ತ ಇಂದು ಮಂಗಳವಾರ 08 ಅಕ್ಟೋಬರ್ 2024ರಂದು ಧಮ್ಮ ರಥಯಾತ್ರೆಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್‌ ಅವರು ಚಾಲನೆ ನೀಡಿದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ರವೀಂದ್ರ ಬೌದ್ಧಾಚಾರ್ಯರು ಬೌದ್ಧ ಧರ್ಮದ ಶ್ಲೋಗನ್ ಪಠಿಸಿದರು. ನಂತರ ಈ ಧಮ್ಮ ರಥ ಯಾತ್ರೆಗೆ ಪ್ರತಾಪೂರ ಗ್ರಾಮದಲ್ಲಿ ಭವ್ಯವಾಗಿ ಸ್ವಾಗತಿಸಲಾಯಿತು. ಅಲ್ಲಿಂದ ರಥ ಯಾತ್ರೆಯು ತಳಭೋಗ, ಮೋರಖಂಡಿ ಮಾರ್ಗವಾಗಿ ವಿವಿಧ ಗ್ರಾಮಗಳಿಗೆ ತೆರಳಿತು.

ಈ ವೇಳೆ ವಿವಿಧ ದಲಿತಪರ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು,‌ ಹಮ್ಮಿಕೊಂಡ ಧಮ್ಮ ರಥಯಾತ್ರೆ ಬಸವಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಿಗೆ‌ ಭೇಟಿ ನೀಡುವ ಮೂಲಕ ರಥಯಾತ್ರೆಗೆ ಚಾಲನೆ‌ ನೀಡಲಾಯಿತು.

ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಪದವಿಪೂರ್ವ ಕಾಲೇಜಿನ ನರಸಿಂಗ ಕಾಂಬಳೆ, ಕಾಂಗ್ರೇಸ್ ಸರ್ಕಾರದ ಪಂಚ ಯೋಜನೆಗಳ ತಾಲೂಕಾಧ್ಯಕ್ಷ‌ ನೀಲಕಂಠ ರಾಠೋಡ, ದಲಿತಪರ ಸಂಘಟನೆಗಳ ಮಾನವ ಬಂಧತ್ವ ವೇದಿಕೆ ತಾಲೂಕಾಧ್ಯಕ್ಷ ಪಿಂಟು ಕಾಂಬಳೆ, ಕರ್ನಾಟಕ ದಲಿತ ರಕ್ಷಣಾ ವೇದಿಯ ತಾಲೂಕಾಧ್ಯಕ್ಷ ಸಿಕಂದರ ಶಿಂಧೆ, ದಲಿತ ಸಂಘಟನೆಯ ತಾಲೂಕು ಅಧ್ಯಕ್ಷ ವಿಜಯಕುಮಾರ ಡಾಂಗೆ, ಗೌತಮ ಜಾಂತೆ, ಸುರೇಶ ಮೋರೆ,‌ ಅಶೋಕ ಮದಾಳೆ, ಯುವರಾಜ ಸೂರ್ಯವಂಶಿ ನೀಲಕಂಠ, ಪ್ರಶಾಂತ ಶಿಂಧೆ, ಸಂದೀಪ‌ ಮುಕಿಂದೆ, ಯುವರಾಜ ಭೆಂಡೆ, ನರಶಿಂಗರೆಡ್ಡಿ ಗದಲೇಗಾಂವ, ರಾಜೇಶ್ ಮೇತ್ರೆ, ದತ್ತಾತ್ರಿ ಸೂರ್ಯವಂಶಿ, ಮಹೇಶ ರಾಗೆ, ರಾಹುಲ ತುತಾರೆ, ಶಂಕರ ಫುಲೆ, ಮಾರುತಿ ಶಿಂಧೆ ಮೋರಖಂಡಿ, ಶಿವದಾಸ ಅಲಗೂಡ, ನಗರಸಭೆ ಸದಸ್ಯ ಭೀಮಶಾ ಫುಲೆ, ಮುರಳಿ ದಾದೆ, ಶೆಶೆರಾವ ಗಾಯಕವಾಡ, ಬಾಲಾಜಿ ಕಾಂಬಳೆ, ಗೌತಮ ಖರ್ಗೆ, ವಿಶಾಲ ಕಾಂಬಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.