ಕೂಡ್ಲಿಗಿ: ಕ್ಷೇತ್ರದ ಕುಮತಿ ಗ್ರಾಮದಲ್ಲಿ ಮೂವರು ಬಾಲಕರು ಹಳ್ಳದಲ್ಲಿ, ಮೃತ ಪಟ್ಟ ಹಿನ್ನಲೆಯಲ್ಲಿ ಸೂತಕದ ವಾತಾವರಣ ಗ್ರಾಮದೆಲ್ಲೆಡೆ ಮನೆ ಮಾಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ರವರು, ಅಕ್ಟೋಬರ್ 10ರಂದು ರಾತ್ರಿ ಮಕ್ಕಳನ್ನು ಕಳೆದು ಕೊಂಡು ನೋವಿನ ಮಡುವಿನಲ್ಲಿರುವ, ಕುಟುಂಬಗಳನ್ನು ಖುದ್ಧು ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಕುಮತಿ ಗ್ರಾಮದಲ್ಲಿ ಕಳೆದ ಅಕ್ಟೋಬರ್ 8 ರಂದು, ಹರಿಜನ ಜಯಣ್ಣನವರ ಪುತ್ರರಾದ, ಗುರು (13), ವಿನಯ್ ಕುಮಾರ್ (11) ಹಾಗೂ ಸೋಮಣ್ಣನವರ ಮಗನಾದ ಸಾಗರ್ (14) ಎಂಬ ಮಕ್ಕಳು.
ಅಕ್ಟೊಬರ್ 8 ರಂದು ಗ್ರಾಮದ ಹೊರವಲಯದಲ್ಲಿರುವ ಜೆನಿಗಿ ಹಳ್ಳದಲ್ಲಿ ಈಜಲು ಹೋಗಿ, ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜರುಗಿತ್ತು.
ಸುದ್ದಿ ತಿಳಿದಾಕ್ಷಣ ಕ್ಷೇತ್ರದ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರು, ಸಂಜೆ ಗ್ರಾಮಕ್ಕೆ ದೌಡಾಯಿಸಿ ನೊಂದ ಕುಟುಂಬನ್ನು ಭೇಟಿಯಾಗಿ. ಸಾಂತ್ವಾನ ಹೇಳಿ ತಮ್ಮ ವೈಯಕ್ತಿಕ ಆರ್ಥಿಕ ನೆರವು ನೀಡಿ, ನೊಂದ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು.
ಶಾಸಕರು ಆ ದಿನ ಕ್ಷೇತ್ರದ ಕೆರೆಗಳಿಗೆ ಬಾಗಿನ ಅರ್ಪಿಸಿದ ಸಂದರ್ಭದಲ್ಲಿ, ಹಳ್ಳ ಕೊಳ್ಳ ಗುಂಡಿ ಕೆರೆಗಳು ತುಂಬಿದ್ದು, ಮುಂಜಾಗ್ರತಾ ಕ್ರಮ ಗಳನ್ನು ಜರುಗಿಸಬೇಕಿದೆ ಹಾಗೂ ಮಕ್ಕಳನ್ನು ಈಜಲು ಬಿಡಬಾರದು. ಸಾಕಷ್ಟು ಮಳೆಯಾಗಿ ತುಂಬಿದ ಕರೆ ಹಳ್ಳ ನೀರಿನ ಮೂಲಗಳನ್ನು ವೀಕ್ಷಣೆ ಮಡುವಾಗ, ಪೋಷಕರು ಅವರ ಚಟುವಟಿಕೆಗಳ ಮೇಲೆ ನಿಗಾ ಇಡಬೇಕೆಂದು ಜನರಲ್ಲಿ ಜಾಗ್ರತೆ ಮೂಡಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಜಾಗ್ರತೆ ಮಾತುಗಳನ್ನಾಡಿದ್ದ ದಿನದಂದೇ ಇಂತಹ ದರ್ಘಟನೆ, ಕುಮತಿ ಗ್ರಾಮದಲ್ಲಿ ಜರುಗಿರುವುದು ಖೇದದ ಸಂಗತಿಯಾಗಿದೆ.
ಉಸ್ಥುವಾರಿ ಸಚಿವರಿಗೆ ಮಾಹಿತಿ ನೀಡಿದ ಶಾಸಕರು-
ಶಾಸಕರು ವಿಜಯ ನಗರ ಜಿಲ್ಲೆಯ ಉಸ್ತುವಾರಿ ಸಚಿವರಾದ, ಬಿ. ಝಡ್. ಜಮೀರ್ ಅಹಮದ್ ಖಾನ್ ರವರನ್ನು ತಡರಾತ್ರಿಯಲ್ಲಿ ಭೇಟಿ ಮಾಡಿದ್ದರು. ಕುಮತಿ ಗ್ರಾಮದಲ್ಲಿ ಜರುಗಿರುವ ದುರ್ಘಟನೆ ಕುರಿತು, ಸಂಪೂರ್ಣ ಮಾಹಿತಿ ನೀಡಿ ಅವರಲ್ಲಿ ವಿವರಿಸಿದ್ದರು.
ಸಚಿವರು ಘಟನೆಗೆ ವಿಷಾದ ವ್ಯಕ್ತಪಡಿಸಿ ನೊಂದುಕೊಂಡರು, ಶೀಘ್ರವೇ ತಾವು ದುಃಖದಲ್ಲಿರುವ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳುವುದಾಗಿ ತಿಳಿಸಿದ್ದರು.
CM ಗೆ ಘಟನೆ ಮಾಹಿತಿ ನೀಡಿದ ಶಾಸಕರು
ಅಕ್ಟೋಬರ್ 9ರಂದು ವಿಧಾನ ಸೌಧದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಶಾಸಕರು ಭೇಟಿ ಮಾಡಿ. ದುರ್ಘಟನೆಯ ಕುರಿತು ವಿವರಿಸಿದ್ದಾರೆ, ನೊಂದ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರಕ್ಕಾಗಿ ಮನವಿ ಮಾಡಿಕೊಂಡಿದ್ಧಾರೆ.
ಮುಖ್ಯ ಮಂತ್ರಿಗಳ ಸೂಚನೆಯ ಮೇರೆಗೆ, ಜಿಲ್ಲಾ ಉಸ್ಥುವಾರಿ ಸಚಿವರು ಹಾಗೂ ವಸತಿ ಸಚಿವರಾದ. ಬಿ.ಜೆಡ್.ಜಮೀರ್ ಅಹಮದ್ ರವರು. ಕೂಡಲೇ ಶಾಸಕರನ್ನು ಸಂಪರ್ಕಿಸಿ ಅವರ ಸಲಹೆ ಮೇರಿಗೆ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು. ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜೊತೆಗೂಡಿ ಗ್ರಾಮಕ್ಕೆ ತೆರಳಿದ್ದಾರೆ. ದುಃಖದಲ್ಲಿರುವ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ತಿಳಿಸಿದ್ದಾರೆ, ತಮ್ಮ ವೈಯಕ್ತಿಕ ಧನ ಸಹಾಯ ಮಾಡಿ ಧೈರ್ಯ ತುಂಬಿದ್ದಾರೆ. ಮತ್ತು ಸರ್ಕಾರದಿಂದ ನೊಂದ ಕುಟುಂಬಕ್ಕೆ, ಪರಿಹಾರ ಹಾಗೂ ವಸತಿ ವ್ಯವಸ್ಥೆಯನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಅಹವಾಲು ಆಲಿಸಿದ ಸಚಿವರು -ಸಚಿವರು ಗ್ರಾಮದಿಂದ ಹಿಂದಿರುಗಿ ತೆರಳುವಾಗ ಕುಮತಿ ಗ್ರಾಮ, ವಲಸೆ ಗ್ರಾಮ ಸೇರಿದಂತೆ, ಮಾರ್ಗ ಮದ್ಯ ಬರುವ ಗ್ರಾಮಗಳ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ವಿಜಯ ನಗರ ಜಿಲ್ಲಾಧಿಕಾರಿಗಳಾದ ಎಂ.ಎಸ್. ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಡಿ.ವೈ.ಎಸ್ಪಿ.ಮಲ್ಲೇಶಪ್ಪ ಮಲ್ಲಾಪುರ, ತಹಶೀಲ್ದಾರರಾದ ಎಂ.ರೇಣುಕಮ್ಮ. ಉಪ ತಹಶೀಲ್ದಾರರಾದ ನೇತ್ರಾವತಿ, ಕೊಟ್ಟೂರು ಪಿಎಸ್ ಗೀತಾಂಜಲಿ ಸಿಂಧೆ ಹಾಗೂ ವೃತ್ತ ನಿರೀಕ್ಷಕ ಟಿ.ವೆಂಕಟಸ್ವಾಮಿ, ಖಾನಹೊಸಹಳ್ಳಿ ಸಬ್ ಇನ್ಸ್ ಪೆಕ್ಟರ್ ಸಿದ್ಧರಾಮ ಬಿದರಾಣಿ, ಕೂಡ್ಲಿಗಿ ಪ. ಪಂ. ಅಧ್ಯಕ್ಷರಾದ ಕಾವಲ್ಲಿ ಶಿವಪ್ಪ ನಾಯಕ, ಹಾಗೂ ಉಪಾಧ್ಯಕ್ಷರಾದ ಲೀಲಾವತಿ ಕೆ. ಪ್ರಭಾಕರ್ ಮತ್ತು ಸದಸ್ಯರು. ದಲಿತ ಮುಖಂಡರು ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾ ಪಂ ಅಧ್ಯಕ್ಷರು ಸದಸ್ಯರು, ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.