ಚಿಂಚೋಳಿ : ಭಾರತೀಯ ಸೇನೆ ಇತರೆ ಯೂನಿಫಾರ್ಮ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ 1, 2(ಎ), 3(ಎ) ಹಾಗೂ 3(ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಲಾಖೆಯಿಂದ 2024-25 ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ (ಬಾಲಕರಿಗೆ ಮಾತ್ರ) ಎಂದು ಚಿಂಚೋಳಿ ತಾಲುಕ ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿ ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1 2 ಎ 3 ಎ ಮತ್ತು 3 ಬಿ ಸೇರಿರಬೇಕು. ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ಗರಿಷ್ಠ ವಾರ್ಷಿಕ ಆದಾಯ ಮೀತಿ(ಪ್ರವರ್ಗ-1ಕ್ಕೆ 2.50 ಲಕ್ಷ ರೂ. ಹಾಗೂ ಪ್ರವರ್ಗ 2(ಎ) 3(ಎ)& 3 (ಬಿ) ಗಳಿಗೆ 1 ಲಕ್ಷ ರೂ. ಕನಿಷ್ಠ ವಿದ್ಯಾರ್ಹತೆ ಅಭ್ಯರ್ಥಿ ಯು 10 ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ 10 ನೇ ತರಗತಿಯನ್ನು ಉತ್ತೀರ್ಣವಾಗಿದ್ದು ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳು & ಸರಾಸರಿ ಶೇ.45 ರಷ್ಟು ಅಂಕಗಳನ್ನು ಪಡೆದಿರಬೇಕು, ತರಬೇತಿಯನ್ನು ಕಲಬುರಗಿ ಜಿಲ್ಲೆ ( ಕೇಂದ್ರ ಸ್ಥಳ) ದಲ್ಲಿ ನೀಡಲಾಗುವುದು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿಯ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ತಾಲುಕು ಹಿಂದುಳಿದ ವರ್ಗಗಳ ಕಲ್ಯಾಣಧಿಕಾರಿಗಳ ಕಛೇರಿ ಚಿಂಚೋಳಿ ಇದರಿಂದ ಪಡೆಯಬಹುದಾಗಿದೆ, ಅರ್ಜಿ ಸಲ್ಲಿಸಲು 30 ಅಕ್ಟೋಬರ್ ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 7411425863 ಸಂಪಕಿ೯ಸಬೇಕು ಎಂದು ತಿಳಿಸಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್