ಬೆಳಗಾವಿ ಜಿಲ್ಲೆ ರಾಮದುರ್ಗ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ರೈಲ್ವೆ ಹೋರಾಟ ಸಮಿತಿಯಿಂದ 2ನೆ ಪುರಬಾವಿ ಸಭೆ ಜರಗಿತು.
ಈ ಒಂದು ಸಭೆಯಲ್ಲಿ ಕರ್ನಾಟಕ ರಾಜ್ಯ ರೈಲ್ವೇ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಕುತುಬುದ್ದಿನ್ ಖಾಜಿರವರು ವೇಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ 30 ವರ್ಷಗಳಿಂದ ಬಾಗಲಕೋಟದಿಂದ ಕುಡಚಿಯವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟ ಮಾಡಿದ್ದರ ಪರವಾಗಿ ಬಾಗಲಕೋಟೆ ಜಿಲ್ಲೆಯ ಜನತೆಯ ಬೆಂಬಲದಿಂದ ಬಾಗಲಕೋಟದಿಂದ ಕುಡಚಿಯವರೆಗೆ ರೈಲು ಮಾರ್ಗ ಆಗಬೇಕೆಂದು ನಿರಂತರ ಹೋರಾಟ ಮಾಡಿದ್ದರ ಪರವಾಗಿ ಕೊನೆಗೂ ಸರಕಾರಗಳು ನಮ್ಮ ಧ್ವನಿಯನ್ನು ಕೇಳಿ ರೂ.816 ಕೋಟಿ ಮಂಜೂರು ಮಾಡಿ ಬಾಗಲಕೋಟದಿಂದ ಲೋಕಾಪೂರದವರೆಗೆ ಮಾರ್ಗ ಈಗ ಸದ್ಯ ಆಗಿದೆ, ಅಲ್ಲಿಂದ ಕುಡಚಿಯವರೆಗೆ ಕೆಲಸ ಪ್ರಾರಂಭವಾಗಿದೆ.
ಲೋಕಾಪುರದಿಂದ ಧಾರವಾಡವರಗೆ ರೈಲ್ವೇ ಮಾರ್ಗ ಮಾಡಿಕೊಳ್ಳಬೇಕೆಂದರೆ ನಾವೇಲ್ಲರೂ ಪಕ್ಷಾತೀತವಾಗಿ ಸೇರಿಕೊಂಡು ಮಾರ್ಗ ಹೋಗುವ ಪ್ರತಿಯೊಂದು ಗ್ರಾಮೀಣ ಪ್ರದೇಶದಲ್ಲಿ ಹೋಗಿ ಜನಜಾಗೃತಿಯನ್ನು ಮಾಡಿ, ನಮ್ಮ ಹೋರಾಟದ ರೂಪುರೇಷೆಗಳನ್ನು ಮೇಲಿಂದ ಮೇಲೆ ಬದಲಾಯಿಸುತ್ತಾ ಜನಪ್ರತಿನಿಧಿಗಳ ಮೇಲೆ ಹೆಚ್ಚು ಬರವಸೆ ಈಡದೆ ಹೆಚ್ಚಿನ ಜನಬೆಂಬಲ ಪಡೆದು ಸಂಘಟನೆಯ ಮೂಲಕ ನಿರಂತರ ಹೋರಾಟ ನಡೆಸಿದರೆ ಮಾತ್ರ ಲೋಕಾಪೂರದಿಂದ ರಾಮದುರ್ಗ, ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ರೈಲ್ವೇ ಬರುವುದು ಖಚಿತ ಎಂದು ಹೇಳಿದರು.
ಸಭೆಯಲ್ಲಿ ಭಾಗಿಯಾಗಿರುವ ಜನರಿಗೆ ಪ್ರೋತ್ಸಾಹ ಕೊಟ್ಟು ಮಾತನಾಡಿದರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ರೈಲ್ವೇ ಯೋಜನೆಗಳನ್ನು ಜಾರಿಗೆ ತರಬೇಕೆಂದು ಈಗಾಗಲೇ 2005 ರಿಂದ ರಾಮದುರ್ಗ ತಾಲೂಕಿನ ಜನತೆ ಒತ್ತಾಯಿಸುತ್ತಾ ಬಂದಿದ್ದಾರೆ ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 2019 ರಲ್ಲಿ ಅಂದಾಜು ಪತ್ರಿಕೆ ಮಾಡಿ ನಂತರದ ಅವಧಿಯಲ್ಲಿ ಅದನ್ನು ತಿರಸ್ಕಾರ ಮಾಡಿದೆ. ಆದ್ದರಿಂದ ನಾವೆಲ್ಲರೂ ತಿರಸ್ಕಾರ ಮಾಡಿದ್ದನ್ನು ಖಂಡಿಸಿ ಬಲಿಷ್ಠ ಸಂಘಟನೆಯನ್ನು ಕಟ್ಟಿಕೊಂಡು ಹಿಂದೆ ನಡೆದ ಹೋರಾಟವನ್ನು ಮುಂದುವರೆಸಿದರೆ ಗೆಲವು ಖಚಿತ ಆದ್ದರಿಂದ ಬರುವ ನವೆಂಬರ್ 12 ರಂದು ಬೃಹತ್ ಪ್ರತಿಭಟನೆ ಮಾಡಿ ನೈರುತ್ಯ ರೈಲ್ವೇ ಇಲಾಖೆಯ ಪ್ರಧಾನ ವ್ಯವಸ್ಥಾಪಕರಿಗೆ ತಹಶೀಲ್ದಾರ ಮೂಲಕ ಮನವಿ ನೀಡಿ ಆ ಮೂಲಕ ನಮ್ಮ ಹೋರಾಟವನ್ನು ಪ್ರಾರಂಭಿಸೋಣ ಎಂದು ವೇಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ ರೈಲ್ವೇ ಹೋರಾಟ ಸಮಿತಿಗೆ ಬೆಂಬಲ ಸೂಚಿಸಿ ಪ್ರದೀಪ ಪಟ್ಟಣ, ದಾದಾಪೀರ ಕೆರೂರ,
ಮಹ್ಮದಶಫಿ ಬೆಣ್ಣೆ, ಜಿ.ಬಿ. ರಂಗನಗೌಡರ, ವೆಂಕಟೇಶ ಹಿರೆರಡ್ಡಿ, ಸೋಮಶೇಖರ ಸಿದ್ದಲಿಂಗಪ್ಪನವರ, ನಿಂಗಪ್ಪ ಕರಿಗಾರ, ಸುಭಾಸ ಘೋಡಕೆ, ಪ್ರಶಾಂತ ಕಲಾದಗಿ, ಶಶಿಕಾಂತ ನೆಲ್ಲೂರ, ಮತ್ತು ವಿಜಯಕುಮಾರ ರಾಠೋಡ ಮತ್ತೀತರರು ಮಾತನಾಡಿ ಈ ಒಂದು ರೈಲ್ವೆ ಹೋರಾಟಕ್ಕೆ ನಮ್ಮಲ್ಲರ್ ತನು ಮನ ಧನದಿಂದ್ ಸಂಪೂರ್ಣ ಬೆಂಬಲ ಇದೆ ಎಂದು ಎಲ್ಲರೂ ಸ್ವಇಚ್ಛಯಿಂದ ಹೇಳಿದರು.
ಈ ಸಂಧರ್ಭದಲ್ಲಿ ಪತ್ರಕರ್ತರು ಎಲ್ಲ ಸಂಘ ಸಂಸ್ಥೆ ಮತ್ತು ಸಂಘಟನೆಯ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.
ವರದಿ – md ಸೊಹೇಲ ಭೈರಕದಾರ ಜೆಕೆ ನ್ಯೂಸ್ ಕನ್ನಡ ರಾಮದುರ್ಗ