ಹುಮನಾಬಾದ: ಇದೆ 20 ಅಕ್ಟೋಬರ್ 2024 ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಥಿಂಕಲ್ ಬ್ರೈನ್ ಸ್ಕಿಲ್ಸ್ ಅಕಾಡೆಮಿಯ ವಿದ್ಯಾರ್ಥಿಗಳು, ಕರಬಸಪ್ಪ ದೇಮಶೆಟ್ಟಿ ಹುಡಗಿ ಮತ್ತು ಸಂಗಮೇಶ್ ಚಂದ್ರಶೇಖರ್ ಹುಮ್ನಾಬಾದ್ , ಹೈದರಾಬಾದ್‌ನಲ್ಲಿ ನಡೆದ ದೇಶದ ಅತಿ ದೊಡ್ಡ ಮೆಮೊರಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕಗಳನ್ನು ಗೆದ್ದು ಜಿಲ್ಲೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ,
ಮೆಮೊರಿ ಕಲಿಕೆಯ ಹೊಸ ತಂತ್ರಗಳು ಮತ್ತು ತರಬೇತಿಗಳಿಂದ ಮಕ್ಕಳಿಗೆ ಈ ಯಶಸ್ಸು ಸಾಧ್ಯವಾಯಿತು.
ಈ ಸ್ಪರ್ಧೆಯಲ್ಲಿ ಬೈನರಿ ನಂಬರುಗಳು, ಮುಖ ಮತ್ತು ಹೆಸರುಗಳನ್ನು ನೆನಪಿನಲ್ಲಿಡುವುದು, ನಂಬರಗಳ ಸರಣಿ, ಪ್ಲೇಯಿಂಗ್ ಕಾರ್ಡ್ಸ್, ಪದಗಳನ್ನು ಅತೀ ವೇಗವಾಗಿ ನೆನಪಿನಲ್ಲಿಡುವ ಸವಾಲುಗಳನ್ನು ಪೂರೈಸಬೇಕಾಗಿತ್ತು.
ಈ ಸಾಧನೆಯ ಈಗ ಈ ಮಕ್ಕಳು ಟರ್ಕಿಯಲ್ಲಿ ನಡೆಯಲಿರುವ ವಿಶ್ವಮಟ್ಟದ ಮೆಮೊರಿ ಚಾಂಪಿಯನ್‌ಶಿಪ್‌ನಲ್ಲಿ ಗೆಲುವಿನ ಗುರಿಯನ್ನು ಹೊಂದಿ ತೀವ್ರ ತರಬೇತಿಯಲ್ಲಿ ನಿರತರಾಗಿದ್ದಾರೆ.
“ನಮ್ಮ ಮಕ್ಕಳ ಈ ಸಾಧನೆ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ಪ್ರೇರಣೆಯಾಗಿದ್ದು, ಮುಂದಿನ ಗೆಲುವಿನ ಕನಸು ಹುಟ್ಟಿಸಿದೆ,” ಎಂದು ಥಿಂಕಲ್ ಬ್ರೈನ್ ಸ್ಕಿಲ್ಸ್ ಅಕಾಡೆಮಿಯ ಸಂಸ್ಥಾಪಕಿ ಶೀಲಾ ಪಂಚಾಳ್ ಮತ್ತು ಅಮಿತಾ ಹಿಬಾರೆ ಅವರು ಹೇಳಿದರು ಹಾಗೂ ಮಕ್ಕಳು ವಿಶ್ವಮಟ್ಟದಲ್ಲಿಯೂ ಸಹ ಪದಕಗಳನ್ನು ಗೆದಿಯಲಿ ಎಂದು ಶುಭ ಹಾರೈಸಿದರು.