ನಂ.1ತನಕ ಪಟ್ಟಣದ ಎಲ್ಲಾ ಅಂಗಡಿ ಮುಗಂಟ್ಟುಗಳ ಮೇಲೆ 60% ಕನ್ನಡ ನಾಮಫಲಕ ಅಳವಡಿಸಬೇಕೆಂದು ಪ್ರಶಾಂತ ಸಿಂಧೆ ಆಗ್ರಹ

ಔರದ:ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ-24 ಅನ್ವಯ ನಾಮಫಲಕದ ಮೇಲ್ಭಾಗದಲ್ಲಿ ಕನ್ನಡ ಭಾಷೆ ಶೇ.60% ಕನ್ನಡ ಪದ ಬಳಸಬೇಕೆಂದು ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಆದೇಶ ಆಗಿದೆ ಆದರೆ, ಔರಾದ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳ ಮೇಲೆ, ಶಾಲಾ, ಕಾಲೇಜು, ಖಾಸಗಿ ಆಸ್ಪತ್ರೆ, ಸಂಘ ಸಂಸ್ಥೆಗಳ ಮೇಲೆ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯ ನಾಮಫಲಕ ರಾರಜಿಸುತ್ತಿವೆ ಇವು ಕೂಡಲೆ ತೆಗಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷರಾದ ಪ್ರಶಾಂತ ಸಿಂಧೆ ಪಟ್ಟಣ ಪಂಚಾಯತ ಅಧಿಕಾರಿ ಸ್ವಾಮಿದಾಸ ಅವರಿಗೆ ಮನವಿ ಪತ್ರ ಸಲ್ಲಿಸಿದರು.

 

ಇಗಾಗಲೆ ಜಿಲ್ಲಾಡಳಿತದಿಂದ ಬೀದರ ಪಟ್ಟಣದಲ್ಲಿ ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಂಡು ಅಂಗಡಿ ಮಾಲಿಕರಿಗೆಲ್ಲಾ 60% ಕನ್ನಡ ಭಾಷೆ ಅಳವಡಿಸುವಂತೆ ತಿಳಿಸಿದ್ದಾರೆ,

 

ಆದರೆ ಔರದ ಪಟ್ಟಣದಲ್ಲಿ ತಾಲೂಕಾಡಳಿತವಾಗಲಿ ಪಟ್ಟಣ ಪಂಚಾತ ಅಧಿಕಾರಿಗಳಾಗಲಿ ಕರ್ನಾಟಕ ಸರ್ಕಾರದ ಸುಮಾರು 60 % ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಬೇಕೆಂಬ ಆದೇಶ ಪಟ್ಟಣದ ಜನರಲ್ಲಿ ಇಲ್ಲಿಯವರೆಗೆ ತರವಲ್ಲಿ ವಿಫಲವಾಗಿದೆ.

 

ಅದರಿಂದ ನಮ್ಮ ಸಂಘಟನೆವತಿಯಿಂದ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆವೆ, ಈಗಾಗಲೆ ಜಿಲ್ಲಾ ಮಟ್ಟದಲ್ಲಿ ನಾಮಫಲಕ ಅಭಿಯಾನ ಕಾರ್ಯ ನಡೆಸಿದಂತೆ ತಾವು ಕುಡಲೆ ಎಚ್ಚೆತ್ತು ಸಂಘಟನೆಗಳೊಂದಿಗೆ ಕೂಡಿ ಅತೀ ಚುರಕಾಗಿ ಕ್ರಮ ವಹಿಸಬೇಕೆಂದು ವಿನಂತಿಸಿಕೊಂಡರು.

 

ಕಾಲ್ನಡಿಗೆ ಮುಖಾಂತರ ಹಾಗೂ ಧ್ವನಿ ವರ್ದಕ ಮೂಲಕ ಪ್ರಚಾರ ಮಾಡಿ ಸರಕಾರದ ಆದೇಶ ಎಲ್ಲರಿಗೆ ತಿಳಿಯುವಂತೆ ಮಾಡಬೇಕು. ಒಂದು ವೇಳೆ ತಾವು ಇದರ ಬಗ್ಗೆ, ನಿಸ್ಕಾಳಜಿ ವಹಿಸಿದಲ್ಲಿ ನಾವು ನಮ್ಮ ಸಂಘಟನೆಯ ಮುಖಾಂತರ ಮುಂದೆ ಬರುವ ದಿನಗಳಲ್ಲಿ ಉಗ್ರ ಹೋರಾಟದ ಮುಖಾಂತರ ಅಂಗಡಿಗಳ ನಾಮಫಲಕಗಳಿಗೆ ಕಪ್ಪು ಮಸಿ ಬಳೆಯುವ ಅಭಿಯಾನ ಮಾಡಲಾಗುತ್ತದೆ.

ಆ ದೀನ ಯಾವುದೇ ಆಗುಹೋಗುಗಳಾದರೆ ಪಟ್ಟಣ ಪಂಚಾಯತ ಆಡಳಿತ ಮಂಡಳಿ ನೇರ ಹೊಣೆಗಾರರಾಗುತ್ತಿರಿ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನ ಬಣದ ತಾಲೂಕಾದ್ಯಕ್ಷ ಪ್ರಶಾಂತ ಸಿಂಧೆ ಪತ್ರ ಮುಖಾಂತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 

ಈ ಸಂದರ್ಭದಲ್ಲಿ ಅಮಿತಕುಮಾರ್ ಶಿಂದೆ, ಪ್ರೆಸಾಗರ್ ಗೊಡಬೋಲೇ. ಅಜಯ್ ಉಪಾಸೆ. ನಿತಿನ್ ಪಾಟೀಲ್ ಹೀಗೆ ಅನೇಕ ಸಂಘಟನೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!