ಬೀದರ್:- ಪಿಟರ್ ಚಿಟಗುಪ್ಪ ಕರವೇ ಜಿಲ್ಲಾಧ್ಯಕ್ಷರು ಬೀದರ್ ರವರ ಸಹಯೋಗದಲ್ಲಿ ಹಾಗೂ ರಾಜ್ಯ ಅಧ್ಯಕ್ಷರ ಆದೇಶದ ಮೇರೆಗೆ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರ ಸಂಪೂರ್ಣ ಸಹಮತದೊಂದಿಗೆ,
ಇಂದು ನಮ್ಮ ಕರ್ನಾಟಕ ನಾಡು ನುಡಿ, ನೆಲ-ಜಲ, ಕಲೆ-ಸಂಸ್ಕೃತಿ, ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ಹಗಲಿರುಳೆನ್ನದೆ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಕಾರ್ಯವೇಸಗುತ್ತಿರುವ “ಶ್ರೀಕಾಂತ್ ಕಾಂಬಳೆ ” ರವರಿಗೆ ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ,
ಬಸವಕಲ್ಯಾಣ ತಾಲೂಕಾ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ ಎಂದು ಪೀಟರ್ ಚೀಟಗುಪ್ಪ ಜಿಲ್ಲಾಧ್ಯಕ್ಷರು ಕರವೇ ಬೀದರವರು ತಿಳಿಸಿದರು,
ಮತ್ತು ಶ್ರೀಯುತರು ಸಂಘಟನೆಗೆ ಸಕ್ರಿಯ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾರೆ ಎಂದು ಆಶಿಸುತ್ತೇವೆ ಹಾಗೂ ಭರವಸೆಯೊಂದಿಗೆ ಈ ಜವಾಬ್ದಾರಿಯನ್ನು ನೀಡಿರುತ್ತೇವೆ ಎಂದು ತಿಳಿಸಿದರು, ಧನಂಜಯ್ ಗಾಯಕವಾಡ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವಕಲ್ಯಾಣ, ಮಾಣಿಕ್ ಕಾಂಬ್ಳೆ ತಾಲೂಕು ಕಾರ್ಯದರ್ಶಿ ಬಸವಕಲ್ಯಾಣ,ಅವಿನಾಶ್ ಕಾಂಬ್ಳೆ ಜಿಲ್ಲಾ ಯುವ ಘಟಕ ಉಪಾಧ್ಯಕ್ಷರು ಬೀದರ್.
ಹೀಗೆ ನೂತನ ಸಂಘಟನಾ ಪದಾಧಿಕಾರಿಗಳಿಗೆ ಜವಾಬ್ದಾರಿಯ ಜೊತೆಗೆ ಗೌರವ ಸನ್ಮಾನ ಮಾಡಿ ಆದೇಶ ಪತ್ರ ನೀಡಿ ಅಭಿನಂದನೆ ತಿಳಿಸಿದರು,
ಇದೆ ಸಂಧರ್ಬದಲ್ಲಿ ರಮೇಶ ಮರ್ಜಾಪೂರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೀದರ್,ಸ್ವಾಮಿದಾಸ್ ಸೊರಳಿಕರ್ ಜಿಲ್ಲಾ ಉಪಾಧ್ಯಕ್ಷರು, ಗುರುರಾಜ್ ಮೇತ್ರೆ, ತಾಲೂಕಾ ಅಧ್ಯಕ್ಷರು ದ ಕ್ಷೆತ್ರ, ನೀಲೇಶ ರಾಠೊಡ್, ಮೋಜೆಸ್ ಆಣ್ದುರೆ, ಯೋಹಾನ್ ಮೀಸೆ, ಶ್ಯಾಮ್ ಕಡ್ಯಾಳ್,ಸಂಘಟನಾ ಪದಾಧಿಕಾರಿಗಳು ಸದಸ್ಯರು ಅನೇಕರು ಉಪಸ್ಥಿತರಿದ್ದರು.