ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಹುಮನಾಬಾದ ತಾಲೂಕು ಅಧ್ಯಕ್ಷರಾಗಿ ರಾಜಶೇಖರ ಜಮಾದಾರ ನೇಮಕ

ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಹುಮನಾಬಾದ ತಾಲೂಕು ಘಟಕ ಉದ್ಘಾಟನೆ

ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಅಂಬಾ ಭವಾನಿ ದೇವಸ್ಥಾನ ಆವರಣದಲ್ಲಿ ರಾಜ್ಯಧ್ಯಕ್ಷ ಶಿವಕುಮಾರ್ ತುಂಗಾ ಹಾಗೂ ಜಿಲ್ಲಾಧ್ಯಕ್ಷ ರಮೇಶ್ ಬಿರಾದಾರ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಹುಮನಾಬಾದ ತಾಲೂಕು ಘಟಕ ಉದ್ಘಾಟನೆ ಮಾಡಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರ ಸಹೋದರ ಸಂತೋಷ ಪಾಟೀಲ್ ವಹಿಸಿದರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಪ್ರಾರಂಭ ಮಾಡಲಾಯಿತು,

ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿ ಗಳಿಗೆ ಆದೇಶ ಪತ್ರ ಸಂಘದ ಐಡಿ ಕಾರ್ಡ್ ನೀಡುವ ಮೂಲಕ ಸಂಘಟನೆಗೆ ಬರ ಮಾಡಿ ಕೊಂಡರು ಹುಮನಾಬಾದ ತಾಲೂಕು ಅಧ್ಯಕ್ಷರಾಗಿ ರಾಜಶೇಖರ್ ಜಮಾಧಾರ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಜಮಾಧಾರ್, ತಾಲೂಕು ರೈತ ಅಧ್ಯಕ್ಷರಾಗಿ ಸಲೀಮ್ ಪಟೇಲ್, ತಾಲೂಕು ಕಾರ್ಯಧ್ಯಕ್ಷರಾಗಿ ಕಂಟೆಪ್ಪಾ ಕ್ಯಾದೆ, ಕೋಶಾಧ್ಯಕ್ಷರಾಗಿ ಸಂಗಪ್ಪಾ ಸಿದ್ದೇಶ್ವರ್, ತಾಲೂಕು ಮಹಿಳಾ ಘಟಕ ಅಧ್ಯಕ್ಷರಾಗಿ ಅಂಬಿಕಾ ರೆಡ್ಡಿ ಸೇರಿದಂತೆ ಎಲ್ಲಾ ಪದಾಧಿಕಾರಿಗಳ ಸದಸ್ಯರ ನೇಮಕ ಮಾಡಲಾಯಿತು,

ಈ ಸಂಧರ್ಭದಲ್ಲಿ ರಾಜ್ಯಉಪಾಧ್ಯಕ್ಷ ವಿನೋದ್ ಗುಪ್ಪಾ, ಜಿಲ್ಲಾ ಉಪಾಧ್ಯಕ್ಷ ಖುತುಬೋದ್ದಿನ್ ಟಪ್ಪಾ, ಜಿಲ್ಲಾ ಮಹಿಳಾ ಅಧ್ಯಕ್ಷೆ ರೇಖಾ ರೆಡ್ಡಿ, ಜ್ಯೋತಿ ಕೆಂಪೇ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ದಲಿತ ಮುಖಂಡ ಲಕ್ಷ್ಮಿಪುತ್ರ ಮಾಳಗೆ, ಜೆಡಿಎಸ್ ತಾಲೂಕು ಅಧ್ಯಕ್ಷ ಗೌತಮ್ ಸಾಗರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Jk news ಕನ್ನಡ ಹುಮನಾಬಾದ ಇದು ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನ

error: Content is protected !!