ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಂಸ್ಕೃತಿಕ ಸಂಸ್ಥೆ ನೀಡುವ ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಖಾಜಾ ಖಲಿಲುಲ್ಲಾ ಆಯ್ಕೆ

ಔರಾದ್ : ಶ್ರೀ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ, ಸಂಸ್ಥೆ (ರಿ) ಬೀದರ ಹಾಗೂ ಹಣ್ಮುಪಾಜಿ ಗೆಳೆಯರ ಬಳಗ ವತಿಯಿಂದ ಶಿಕ್ಷಣ, ಸಾಹಿತ್ಯ, ವೈದ್ಯಕೀಯ, ಮಾಧ್ಯಮ, ಪೊಲೀಸ್, ಕಾನೂನು, ಕಲೆ, ಕೃಷಿ, ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡುವ ಕನ್ನಡ ಸೇವಾ ರತ್ನ ಪ್ರಶಸ್ತಿ ಗೆ ಔರಾದ್ ತಾಲ್ಲೂಕಿನ ವಡಗಾಂವ್ (ದೆ ) ಗ್ರಾಮದ ಹೆಮ್ಮೆಯ ಪುತ್ರ ಕೆ ಎ ಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಆಯ್ಕೆ ಯಾಗಿರುವುದು ಅವರ ಹುಟ್ಟೂರಿನಲ್ಲಿ ಸಂತಸ ಮೂಡಿಸಿದೆ.

ಮೂಲತಃ ತಾಲೂಕಿನ ವಡಗಾಂವ್ (ದೆ )ಗ್ರಾಮದಲ್ಲಿ ಅತಿ ಕಡು ಬಡತನ ಕುಟುಂಬದಲ್ಲಿ ಜನಿಸಿದ ಕೆ ಎ ಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಉತ್ತಮ ರೀತಿಯಿಂದ ಕಠಿಣ ಪರಿಶ್ರಮ ಪಟ್ಟು 2017ರಲ್ಲಿ ಕೆಎಎಸ್ ಅಧಿಕಾರಿಯಾಗಿ ನೇಮಕವಾಗಿ ಸದ್ಯಕ್ಕೆ ಯಾದಗಿರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ(ಸಿ ಟಿ ಒ )ರಾಗಿ ಸಮರ್ಪಕ ಸೇವೆ ಮಾಡುವಲ್ಲಿ ತಲ್ಲಿನರಾಗಿದ್ದಾರೆ.

ಸದಾ ಜನ ಪರ ಕಾಳಜಿ ಯುಳ್ಳ ತಾಯಿ ಹೃದಯ ವುಳ್ಳ ಈ ಅಧಿಕಾರಿ ಜಿಲ್ಲೆ,ತಾಲೂಕು, ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನ ಇರುವ ಇವರು ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ತನ್ನಿಂದ ಕೈಲಾದಷ್ಟು ಅಳಿಲು ಸೇವೆ ಮಾಡುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ತಂದೆ ತಾಯಿಗಳಂತೆ ಅವರಿಗೆ ನೇರವಾಗಿ, ಅವರ ಬೆನ್ನಿಗೆ ಹೆಮ್ಮರದಂತೆ ನಿಂತುಕೊಂಡು , ತನ್ನ ಅಣ್ಣ ತಮ್ಮಂದಿರು ಹಾಗೂ ಅಕ್ಕ-ತಂಗಿಯರಂತೆ ಅವರ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವರ ಗರಡಿಯಲ್ಲಿ ಬೆಳೆದ ಅನೇಕ ಯುವಕ ಯುವತಿಯರು ಇಂದು ಸರಕಾರದ ಹಲವಾರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ಅವರ ಸಾಮಾಜಿಕ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.

ಕೆ ಎ ಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ, ಸಂಸ್ಥೆ (ರಿ) ಬೀದರ ಹಾಗೂ ಹಣ್ಮುಪಾಜಿ ಗೆಳೆಯರ ಬಳಗ ವತಿಯಿಂದ ಇವರನ್ನು ಕನ್ನಡ ಸೇವಾರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕ್ರಮ ಆಯೋಜಿತ ಅಧ್ಯಕ್ಷ ಹಣ್ಮು ಪಾಜಿ ವಿಜಯವಾಣಿಗೆ ತಿಳಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ನವೆಂಬರ್ 5 ರಂದು ಬೀದರ್ ನಗರದ ಡಾ.ಚನ್ನಬಸವ ಪಟ್ಟ ದೇವರ ರಂಗಮಂದಿರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದೆಂದು ತಿಳಿಸಲಾಗಿದೆ.

ಕನ್ನಡ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇವರ ಅಭಿಮಾನಿ ಬಳಗದ ಡಾ. ಸಿದ್ದಾರೆಡ್ಡಿ ಬಿರಾದರ್, ಗ್ರಾಪಂ ಅಧ್ಯಕ್ಷ ರಾಜ್ ಕುಮಾರ್ ಹೇಡೆ , ರತಿಕಾಂತ್ ನೇಳಗೆ , ನವೀಲ್ ಕುಮಾರ್ ಉತ್ಕಾರ, ಚಂದ್ರಕಾಂತ್ ಫುಲೆ, ಶಿವಕುಮಾರ ಸೊರಳೆ, ಹಾವಗಿರಾವ್, ರವಿಕುಮಾರ್ ಗಂಗಾ, ಪತ್ರಕರ್ತ ಮಲ್ಲಪ್ಪಾ ಗೌಡ, ರಾಚಯ್ಯ ಸ್ವಾಮಿ .ಬಿ ಎಂ ಅಮರವಾಡಿ, ಮಲ್ಲಿಕಾರ್ಜುನ್ ಟಂಕಸಾಲೆ, ಗಜಾನನ್ ಮಳ್ಳ, ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

 

ವರದಿ ರಾಚಯ್ಯ ಸ್ವಾಮಿ

error: Content is protected !!