ಚಿಂಚೋಳಿ ಕಾಳಗಿ ಚಿತ್ತಾಪುರ ಸೇಡಂ ಕಮಲಾಪುರ ಹಾಗೂ ಹುಮನಬಾರ ತಾಲೂಕಿನ ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಾಳೆ

ಚಿಂಚೋಳಿ ಕಾಳಗಿ ಚಿತ್ತಾಪುರ ಸೇಡಂ ಕಮಲಾಪುರ ಹಾಗೂ ಹುಮನಬಾರ ತಾಲೂಕಿನ ರೈತರ ವತಿಯಿಂದ, ಶ್ರೇಷ್ಠ ನ್ಯಾಯಾಲಯದಿಂದ ಚಿಂಚೋಳಿ ಸಿದ್ಧ ಸಿರಿ ಇಥೆನಾಲ್ ಹಾಗೂ ಪವರ್ ಕಾರ್ಖಾನೆಗೆ ಸಂಬಂಧಪಟ್ಟ ಕೇಸ್ ಅನ್ನು ಕರ್ನಾಟಕ ರಾಜ್ಯ ಸರ್ಕಾರವು ಅತಿ ಶೀಘ್ರದಲ್ಲಿ ವಾಪಸ್ ಪಡೆದು ಕಾರ್ಖಾನೆಯನ್ನು ಪ್ರಾರಂಭ ಮಾಡಲು ಅನುಮತಿ ನೀಡುವವರೆಗೂ ಹಾಗೂ ಈಗಾಗಲೇ ರೈತರ ಜಮೀನುಗಳನ್ನು ವಕ್ಫ್ ಬೋರ್ಡ್ ಆಸ್ತಿಗಳೆಂದು ಘೋಷಣೆ ಮಾಡಿದ್ದನ್ನು ಕರ್ನಾಟಕ ರಾಜ್ಯ ಸರ್ಕಾರವು ಅತಿ ಶೀಘ್ರದಲ್ಲಿ ರದ್ದುಪಡಿಸಿ ಮೊದಲಿನಂತೆ ರೈತರ ಜಮೀನನ್ನು ರೈತರಿಗೆ ಉಳಿಯುವಂತೆ ಮಾಡುವವರಿಗೆ ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ರೈತ ರಿಂದ ಧರಣಿ ಸತ್ಯಾಗ್ರಹ ಚಿಂಚೋಳಿ ನಗರದ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಮಾಡಲಾಗುವುದು ರೈತರು ತಿಳಿಸಿದ್ದಾರೆ.

 

ವರದಿ : ರಾಜೇಂದ್ರ ಪ್ರಸಾದ್

error: Content is protected !!