೩೭ನೇ ದತ್ತ ಜಯಂತಿ ಜಾತ್ರಾ ಮಹೋತ್ಸವ.. ಕಾಶಿ ಜಗದ್ಗುರು ಭಾಗಿ..

 

೧೧೧೧ ಜನ ತಂದೆ-ತಾಯಿಯರ ಪಾದಪೂಜೆ

 

ಔರಾದ್ : ಪ್ರಸಕ್ತ ಸಾಲಿನಲ್ಲಿ ನಡೆಯುವ ೩೭ನೇ ದತ್ತ ಜಯಂತಿ ಜಾತ್ರಾ ಮಹೋತ್ಸವದಲ್ಲಿ ೧,೧೧೧ ಜನ ತಂದೆ-ತಾಯಿಯರ ಪಾದಪೂಜೆ ಮಾಡಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ದತ್ತ ಸಾಯಿ ಶನೇಶ್ವರ ದೇವಸ್ಥಾನದ ಅಧ್ಯಕ್ಷರು, ಹಣೇಗಾಂವ ಶ್ರೀಗಳಾದ ಶಂಕರಲಿAಗ ಶಿವಾಚಾರ್ಯರು ಹೇಳಿದರು. ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಶನಿವಾರ ತಂದೆ-ತಾಯಿಯರ ಪಾದಪೂಜೆ ಕಾರ್ಯಕ್ರಮದ ಕರಪತ್ರಗಳು ಬಿಡುಗಡೆ ಮಾಡುವ ಮೂಲಕ ಮಾತನಾಡಿದರು.

ಡಿಸೆಂಬರ್ ೧೦ ರಂದು ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ತಂದೆ-ತಾಯಿಯರ ಪಾದಪೂಜೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಅಂದು ಬೆಳಗ್ಗೆ ಪಟ್ಟಣದ ಉದ್ಭವಲಿಂಗ ಶ್ರೀ ಅಮರೇಶ್ವರ ದೇವಸ್ಥಾನದಿಂದ ದತ್ತಾತ್ರೇಯ ದೇವಸ್ಥಾನದ ವರೆಗೆ ಜಗದ್ಗುರುಗಳ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ತಾಲೂಕಿನ ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ ಎಂದರು.

ಈಗಾಗಲೇ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ಆರಂಭಿಸಲಾಗಿದೆ. ಪ್ರಪಂಚದಲ್ಲಿ ಮೊದಲ ದೇವರೆಂದರೆ ತಂದೆ-ತಾಯಿ. ಆದ್ದರಿಂದ ವೇದದಲ್ಲಿ ಮಾತೃ ದೇವೋ ಭವ ಪಿತೃ ದೇವೋ ಭವ ಎಂದು ಹೇಳಲಾಗಿದೆ ಎಂದರು.

ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ ಇಂತಹ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯುತ್ತಿರುವುದು ಐತಿಹಾಸಿಕವಾಗಿದೆ. ಆದ್ದರಿಂದ ಎಲ್ಲರೂ ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಎಂದರು. ಇನ್ನೂ ಪ್ರತಿ ವರ್ಷದಂತೆ ೭ ದಿನದ ಹರಿನಾಮ ಸಪ್ತಾಹ ಜಾರಿಯಾಗಲಿದೆ. ಅಲ್ಲದೇ ನಿತ್ಯ ಭಜನೆ, ಕೀರ್ತನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.

ಜಾತ್ರಾ ಮಹೋತ್ಸವ ನಿಮಿತ್ತ ದೇಶ ಸೇವೆ, ಸಾಮಾಜಿಕ ಸೇವೆ, ಶೈಕ್ಷಣಿಕ, ಕೃಷಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ೫ ಜನರಿಗೆ ಶ್ರೀ ಗುರು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಈ ವೇಳೆ ಪ್ರಮುಖರಾದ ಕಲ್ಲಪ್ಪ ದೇಶಮುಖ, ಮಾದಪ್ಪ ಖೂಬಾ, ತಮ್ಮಣ್ಣ ಜೆ.ಇ, ಚಂದ್ರಕಾAತ ಪಾಟೀಲ್, ಕಿರಣ ಉಪ್ಪೆ, ಚಂದ್ರಕಾAತ ಜಾಧವ, ತಾನಾಜಿ ಗಾದಗೆ, ಪಪಂ ಸದಸ್ಯ ದಯಾನಂದ ಘೂಳೆ, ಡಾ. ನಾಗೇಶ ಕೌಟಗೆ, ಮಲ್ಲಿಕಾರ್ಜುನ ಸ್ವಾಮಿ, ಶರಣಪ್ಪ ಪಾಟೀಲ್, ಬಸವರಾಜ ಹಳ್ಳೆ, ಕುಮಾರ ಸ್ವಾಮಿ ಸೇರಿದಂತೆ ಅನೇಕರಿದ್ದರು.

 

ವರದಿ : ರಾಚಯ್ಯ ಸ್ವಾಮಿ 

error: Content is protected !!