ಬೆಳಗಿನ ಉಪಹಾರ ಸೇವಿಸಿ ಅಸ್ವಸ್ಥ ಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ರಾಜಶೇಖರ ಪಾಟೀಲ

ಹುಮನಾಬಾದ ತಾಲೂಕಿನ ಕಲ್ಲೂರ್ ರಸ್ತೆಯ ಬಸವತೀರ್ಥ ಮಠದ ಶಾಲೆಯ ಮಕ್ಕಳು ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ಸುದ್ದಿ ತಿಳಿದ ತಕ್ಷಣ ಮಾಜಿ ಸಚಿವರಾದ ರಾಜಶೇಖರ ಬಿ ಪಾಟೀಲ ರವರು ಹುಮನಾಬಾದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತಕ್ಷಣ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಯಾವುದೇ ರೀತಿಯಿಂದ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಿ ನಂತರ ಹಣ್ಣು ಹಂಪಲುಗಳ ಆಹಾರದ ಕಿಟ್ ಜ್ಯುಸ್ ವಿತರಿಸಿ ಸಂಬಂಧಪಟ್ಟ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಕ್ಕಳ ಆರೋಗ್ಯದ ಕುರಿತು ವಿಶೇಷವಾಗಿ ವೈದ್ಯರ ಜೊತೆ ಚರ್ಚಿಸಿದರು.

 

ಇದೇ ಸಂಧರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಅಭಿಷೇಕ ಆರ್. ಪಾಟೀಲ ರವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಫ್ಸರ್ ಮಿಯಾ, ಪುರಸಭೆ ಉಪಾಧ್ಯಕ್ಷರಾದ ಮುಕ್ರಾಂ ಜಾ ರವರು,ಮುಖ್ಯ ವೈದ್ಯಾಧೀಕಾರಿ ನಾಗನಾಥ ಹುಲಸೂರೆ, ಬಾಖರ್ ಜಾನಿ, ಡಿಡಿಪಿಐ ಸಲೀಂ ಪಾಶಾ, ಕ್ಷೇತ್ರ ಶಿಕ್ಷಣಾಧೀಕಾರಿ ವೆಂಕಟೇಶ ಎಸ್ ಗೂಡಾಳ, ಹೆಚುವರಿ ಎಸ್.ಪಿ ಮಹೇಶ ಮೇಘಣ್ಣನವರ, ಪೋಲೀಸ್ ಉಪಾಧ್ಯಕ್ಷರಾದ ನ್ಯಾಮೇಗೌಡ, ತಾಲೂಕಾ ಆರೋಗ್ಯ ಅಧಿಕಾರಿ ಶಿವಕುಮಾರ ಸಿದ್ದೇಶ್ವರ, ತಾ. ಪಂ ಕಾರ್ಯನಿರ್ವಹಕ ಅಧಿಕಾರಿ ದೀಪಿಕಾ ನಾಯ್ಕರ್ ಪ್ರಮುಖರಾದ ಮೈನೋದ್ದೀನ್ ಮೊಮೀನ್, ವಿಜಯಕುಮಾರ ನಾತೆ, ಪದ್ರೀಪ ಪಸರ್ಗಿ, ದತ್ತಕುಮಾರ ಚಿದ್ರಿ, ಸಚೀನ ದಾಡಗೆ, ಸುಧಾಕರ್ ಸಂಗಮ, ಮತ್ತು ಪಕ್ಷದ ಮುಖಂಡರು ಸೇರಿದಂತೆ ಮುಂತಾದ ಪ್ರಮೂಖರು ಉಪಸ್ಥಿತರಿದ್ದರು.

error: Content is protected !!