ಬೀಳಗಿ : ಪಟ್ಟಣದ ಬಸವೇಶ್ವರ ವೃತ್ತದಿಂದ ವಿವಿಧ ಜನಪದ ಕಲಾ ತಂಡ ಹಾಗೂ ನೂರಾರು ಮಹಿಳೆಯರು ಕುಂಭ ಆರತಿಯೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ತಹಸಿಲ್ದಾರ್ ಕಚೇರಿಯವರಿಗೆ ನಡೆಯಿತು,
ಕನಕ ಭಾವಚಿತ್ರಕ್ಕೆ ತಹಸಿಲ್ದಾರ್ ವಿನೋದ್ ಹತ್ತಳ್ಳಿ, ತಾ.ಪಂ.ಇಒ ಅಭಯ್ ಕುಮಾರ್ ಮೊರಬ,ಬಿಇಒ ಆರ್ ಎಸ್ ಆದಪುರ, ಸಿಡಿಪಿಒ ಬಸವರಾಜ ಕವಟೇಕರ ಸೇರಿ ವೇದಿಕೆ ಮೇಲೆ ಉಪಸ್ಥಿತರುವ ಎಲ್ಲರೂ ಪುಷ್ಪಾರ್ಚನೆ ಮಾಡಿದರು,
ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷರು ಹಾಗೂ ಶಾಸಕರು ಜೆ ಟಿ ಪಾಟೀಲ ಅವರು.
ಮಾನವ ಕುಲದ ಚಿಂತನೆ ಸಮಾಜದ ಏಳಿಗೆ ಯನ್ನ ಚಿಕ್ಕ ವಯಸ್ಸಿನಲ್ಲಿ ರೂಡಿಸಿಕೊಂಡು ಇಡೀ ಮಾನವ ಕುಲದಲ್ಲಿ ಜೀವಂತವಾಗಿದ್ದವರು ಕನಕದಾಸರು, ಪುರಂದರದಾಸರು, ಕಾಳಿದಾಸರು, ಮಹಾತ್ಮ ಗಾಂಧಿ ಡಾ. ಬಿಆರ್ ಅಂಬೇಡ್ಕರ್ ಹಾಗೂ ಬಸವಣ್ಣನವರು, ಸಮಾಜದಲ್ಲಿ ತುಳಿತಕ್ಕೆ ಒಳಗಾದಂತಹ ಜನರಿಗೆ ಸಂವಿಧಾನದ ಮೂಲಕ ಶಕ್ತಿ ಕೊಟ್ಟಂತಹ ವ್ಯಕ್ತಿ ಡಾ. ಬಿಆರ್ ಅಂಬೇಡ್ಕರ್, ಇಂತಹ ನಾಯಕರುಗಳ ಚಿಂತನೆಗಳನ್ನು ಆದರ್ಶಗಳನ್ನ ಮನಸ್ಸಿನಲ್ಲಿ ರೂಡಿಸಿಕೊಳ್ಳಬೇಕು ನಿಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಹೊತ್ತು ಕೊಡಿ, ತಂತ್ರಜ್ಞಾನ ತುಂಬಾ ಮುಂದುವರೆದಿದೆ,
ಜಗತ್ತಿನಲ್ಲಿ ಅಂಗೈಯ ಅನ್ನುವ ಹಾಗೆ ಇನ್ನ ಮೇಲೆ
ನೀವು ಉಪ ನೊಂದಣಿ ಕಚೇರಿ ಹಾಗೂ ಆರ್ ಟಿ ಓ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಹೊಸ ನಿಯಮ ಜಾರಿಗೆ ತರಲು ಚಿಂತನೆ ನಡೆಸಿದೆ, ಕಚೇರಿಗೆ ಹೋಗದೆ ನಿಮಗೆ ಅಗತ್ಯ ಇರುವ ದಾಖಲೆಗಳು ಆನ್ಲೈನ್ ಮೂಲಕ ಸರಿಯಾಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು, ಇದರಿಂದ ಜನರಿಗೂ ಅನುಕೂಲ ಹಾಗೂ ಭ್ರಷ್ಟಾಚಾರದ ಪ್ರಮಾಣವು ಕಡಿಮೆಯಾಗುತ್ತದೆ. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಟವನ್ನು ತಪ್ಪಿಸಬಹುದು,
ಶೀಘ್ರದಲ್ಲಿ ಮತ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಹೋಗಿ ಯಾರಿಗೆ ವಾಸಿಸಲು ಮನೆ ಇಲ್ಲ,ತಗಡಿನ ಶೆಡ್ಡಿನಲ್ಲಿ, ಗುಡಿಸಿಲಿನಲ್ಲಿ ವಾಸಿಸುತ್ತಾರೆ ಅಂತವರನ್ನ ಜಮಖಂಡಿ ಎಸಿ ಶ್ವೇತಾ ಬೀಡಿಕರ ರವರು ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಪಾರದರ್ಶಕವಾಗಿ ಯಾರು ಅರ್ಹರಿದ್ದಾರೆ ಅಂತವರ ಸರ್ವೆ ಮಾಡಿಸಿ ವರದಿ ಒಪ್ಪಿಸಿ,ಸಿದ್ದರಾಮಯ್ಯನವರು ಐದು ಗ್ಯಾರಂಟಿಗಳನ್ನ ಕೊಟ್ಟಿದ್ದಾರೆ ಅದರ ಜೊತೆಗೆ ಮನೆಗಳನ್ನು ಕೊಡಿಸೋಣ, ಟ್ಯಾಕ್ಟರ್,ಆಟೋ, ಟೆಂಪೋ,ಜೀಪ್, ನಡೆಸುವ ಒಂದು ಸಾವಿರ ಜನರಿಗೆ ಉಚಿತವಾಗಿ ಲೈಸೆನ್ಸ್ ಕೊಡಿಸಿದ್ದೇನೆ, ತಾಲೂಕಿನಲ್ಲಿರುವ ಒಟ್ಟು ದ್ವಿಚಕ್ರ ವಾಹನ,ಲೈಸೆನ್ಸ್ ಇಲ್ಲದೆ ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವವರಿಗೆ ಕಡಿವಾಣ ಹಾಕೋಣ ಸರ್ವೇ ಮಾಡಿ,
ಇನ್ನು ಕಬ್ಬಿನ ಟ್ರ್ಯಾಕ್ಟರ್ ನಲ್ಲಿ ಹೆಚ್ಚು ಏರು ಧ್ವನಿಯಲ್ಲಿ ಟೇಪ್ ರೆಕಾರ್ಡ್ ಹಚ್ಚಿಕೊಂಡು ಚಲಾವಣೆ ಮಾಡಿದ್ದು ಕಂಡು ಬಂದರೆ ಯಾವುದೇ ಮುಲಾಜಿ ಇಲ್ಲದೆ ಟೇಪ್ ವಶಕ್ಕೆ ಪಡೆದುಕೊಳ್ಳಿ, ಎಲ್ಲಾ ಕಬ್ಬಿನ ವಾಹನ ಚಾಲಕರು ನಿಮ್ಮ ಗಾಡಿಗಳಿಗೆ ರಿಪ್ಲೆಕ್ಟರ್ ಅಳವಡಿಸ ಅಪಘಾತ ಆಗುವುದನ್ನ ತಪ್ಪಿಸಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಿಬೇಕು
ಅಭಿವೃದ್ಧಿಗಾಗಿ ನಿಮಗೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿಸುತ್ತೇನೆ, ನಿಮ್ಮ ಕಚೇರಿ ಕೆಲಸವನ್ನು ಬದಿಗೆ ಇಟ್ಟು ಮೊದಲು ಈ ಕೆಲಸ ಮಾಡಿದರೆ ಜನ ನಿಮ್ಮನ್ನ ನೆನೆಸುತ್ತಾರೆ, ನಿಮಗೆ ಏನೇ ಅಡ್ಡಿ ಆತಂಕ ಇದ್ದರೆ ನಾವು ಬೆನ್ನಿಗೆ ಇರುತ್ತೇವೆ ಧೈರ್ಯದಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿ ಈ ಭಾರಿ ಶಿಸ್ತು ಬದ್ಧವಾಗಿ ಕನಕ ಜಯಂತಿಯನ್ನು ಆಚರಣೆ ಮಾಡಲಾಗಿದೆ ಎಂದರು.
ಬೀಳಗಿ ಕ್ರಾಸ್ ನಲ್ಲಿ ಇರುವಂತಹ ಕನಕ ಭವನ ಅರ್ಧಕ್ಕೆ ನಿಂತಿದೆ ಅನುದಾನವನ್ನ ಬಿಡುಗಡೆ ಮಾಡಿಸಿ ಬರುವ ಕನಕ ಜಯಂತಿ ಒಳಗೆ ಭವನದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಮಾಜದ ಮುಖಂಡ ಸತ್ಯಪ್ಪ ಮೆಲ್ನಾಡ್ ಬೇಡಿಕೆ ಇಟ್ಟಾಗ,ಡಿ 30 ಕ್ಕೆ ಅಧಿವೇಶನ ಆರಂಭ ವಾಗಲಿದೆ ನಿಮ್ಮ ಸಮಾಜದ ಮುಖಂಡರು ಬನ್ನಿ ಚರ್ಚಿಸಿ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ,
ಜೆ ಟಿ ಪಾಟೀಲ ಶಾಸಕರು ಬೀಳಗಿ.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ಪ.ಪಂ ಡಿಯಪ್ಪ ಕರಿಗಾರ,ಪ.ಪಂ. ದೇವೀದ್ರ ಧನಪಾಲ್,ನೊಂದಣಿ ಅಧಿಕಾರಿಗ,ಮುಂಡರಗಿ,ಕೃಷಿ ಅಧಿಕಾರಿ ಶ್ರೀನಿವಾಸ್ ಪಾಟೀಲ್, ಕ್ಷೆತ್ರ ಶಿಕ್ಷಣಾಧಿಕಾರಿ ಆರ್ ಎಸ್ ಆದಾಪುರ,ಹಣಮಂತ ಕಾಖಂಡಕಿ, ಕಿರಣ್ ಬಾಳಗೋಳ,ಸಿದ್ದು ಸರಾವರಿ,ಸೇರಿ ಅನೇಕರು ಭಾಗಿಯಾಗಿದ್ದರು.
ವರದಿ: ಖಾಜಾಮೈನುದ್ದಿನ ತಹಶೀಲ್ದಾರ್