ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದ ನಾಲ್ಕು ಊರಿನ ಸೀಮೆಯಲ್ಲಿರುವ ಶ್ರೀ ಹಳ್ಳಿ ಲಕ್ಷ್ಮೀದೇವಿಯ ಎರಡನೆಯ ವರ್ಷದ ಜಾತ್ರೆಗೆ ವಿಶೇಷ ರೀತಿಯಲ್ಲಿ ಈ ವರ್ಷ ಹೊಸದಾಗಿ ಪಾದಗಟ್ಟೆಯನ್ನು ನಿರ್ಮಿಸಿ ಸೋಮವಾರ ದಿವಸ ಹುಕ್ಕೇರಿ ಶ್ರೀ ಮಹಾಲಕ್ಷ್ಮಿ ದೇವಿ ಪಲಕ್ಕಿ ಮದಿಹಳ್ಳಿ ಗ್ರಾಮದ ಶ್ರೀ ಲಘುಮವ್ವ ದೇವಿ ಪಲ್ಲಕ್ಕಿ ಶ್ರೀ ಹಾಲಸಿದ್ದೇಶ್ವರ ಪಲ್ಲಕ್ಕಿ ಶ್ರೀ ರೇಣುಕಾ ತಾಯಿ ದಿವ್ಯ ಜಗ ಮದಿಹಳ್ಳಿ ಗ್ರಾಮದ ಬೀರ ಸಿದ್ದೇಶ್ವರ ಗುಡಿಯಲ್ಲಿ ಸೇರಿದರು ಅಲ್ಲಿಂದ ಪಲ್ಲಕ್ಕಿಗಳು ಶ್ರೀ ಹಳ್ಳಿ ಲಕ್ಷ್ಮಿ ಗುಡಿಗೆ ಬರಮಾಡಿಕೊಂಡರು ರಾತ್ರಿ ಡೊಳ್ಳಿನ ಪದಗಳು ಜರುಗಿದವು ಮಂಗಳವಾರ ಬೆಳಿಗ್ಗೆ ಶ್ರೀ ಹಳ್ಳಿ ಲಕ್ಷ್ಮೀದೇವಿಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿತು ಗ್ರಾಮದ ಪಲ್ಲಕ್ಕಿಗಳು ತಾಯಿಯ ಗುಡಿಯನ್ನು ಸುತ್ತಿ ಶ್ರೀ ದೇವಿಗೆ ಬೆಟ್ಟಿ ನೀಡಿ ಬಂದ ಭಕ್ತಾದಿಗಳಿಗೆ ಆಶೀರ್ವದಿಸಿದರು ಗ್ರಾಮದ ಮಹಿಳೆಯರು ಅಂಬಲಿ ಬಿಂದಿಗೆ ಪ್ರಸಾದ ತಂದು ತಾಯಿಗೆ ಅರ್ಪಿಸಿದರು ಮಧ್ಯಾಹ್ನ ಅನ್ನಪ್ರಸಾದ ಜರಗಿತು ನಾಲ್ಕು ಸೀಮೆಯಲ್ಲಿರುವ ಶ್ರೀ ಹಳ್ಳಿ ಮಹಾಲಕ್ಷ್ಮಿ ದೇವಿ ಮದಿಹಳ್ಳಿ ಹುಕ್ಕೇರಿ ಮದುಮಕನಾಳ ಬೆನಿವಾಡ ಹಾಗೂ ಸುತ್ತಮುತ್ತಲಿನ ಗ್ರಾಮದ ಸದ್ಭಕ್ತರು ಬಂದು ಶ್ರೀ ಹಳ್ಳಿ ಲಕ್ಷ್ಮಿಯ ಹಾಗೂ ಪಲ್ಲಕ್ಕಿಯ ಆಶೀರ್ವಾದ ಪಡೆದು ಪುನೀತರಾದರು ಈ ಸಮಾರಂಭದಲ್ಲಿ ಸತ್ಯಪ್ಪ ಬಾಗಿ ಮಲ್ಲೇಶ ಬುಗುಡಿ ಕಟ್ಟಿ ದೇವರುಷಿಯಾದ ತಾನಾಜಿ ಹೊಸೂರೆ.ಸಿದ್ದಣ್ಣ ಮುತ್ತಗಿ. ಜೀವಣ್ಣ ಕಮತೆ. ಅನ್ನೇಶ್ ಲೊಳಸೂರೆ. ಸಿದ್ದರಾಮ್ ಜೋಡಟ್ಟಿ. ಮಲ್ಲೇಶ್ ಬಾಗಿ. ಬೀರಪ್ಪ ಭಾಗಿ. ಬೀರಪ್ಪ ಗೋಟುರೆ. ವಿವಿಧ ಗ್ರಾಮದ ಮಹಿಳೆಯರು ಮಕ್ಕಳು ಗುರು ಹಿರಿಯರು ಮುಖಂಡರು ಜಾತ್ರೆಯ ಉಸ್ತುವಾರಿಯಲ್ಲಿ ಎಲ್ಲ ಗ್ರಾಮದ ಯುವಕರು ಭಾಗಿಯಾದರು ಹಾಗೂ ಸಾಯಂಕಾಲ ಬಂದಂತ ಪಲ್ಲಕ್ಕಿ ಶ್ರೀ ಹಳ್ಳಿ ಲಕ್ಷ್ಮೀದೇವಿಗೆ ಬೆಟ್ಟಿ ನೀಡಿ ಸ್ವಗ್ರಾಮಕ್ಕೆ ಮರಳಿದರು 2ನೇ ವರ್ಷದ ಜಾತ್ರಾ ಪಬ್ರಂಜನೆಯಿಂದ ಜರಗಿತೆಂದು ಎಲ್ಲರೂ ಉತ್ಸಾಹದಿಂದ ಶ್ರೀ ದೇವಿಯ ಆಶೀರ್ವಾದ ಪಡೆದು ಪುನೀತರಾದರು.
ವರದಿ : ಸದಾನಂದ ಎಚ್