ಯುವಕನೊರ್ವ ಅಪ್ರಾಪ್ತ ಬಾಲಕಿಗೆ ತಾಳಿ ಕಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರ್ಕಾರಿ ವಸತಿ ಶಾಲೆಯ ಕಂಪೌಂಡ್ ಬಳಿ ನಡೆದಿದೆ.
ಯುವಕ ಅಪ್ರಾಪ್ತಿಗೆ ತಾಳಿ ಕಟ್ಟಿದ್ದಾನೆ. ಮೌನೇಶ ಮಾದರ ಅಪ್ರಾಪ್ತಿಗೆ ತಾಳಿ ಕಟ್ಟಿದ ಯುವಕನಾಗಿದ್ದು ಅಪ್ರಾಪ್ತಿಗೆ ಮೌನೇಶ ತಾಳಿಕಟ್ಟೆ ವಿಡಿಯೊ ಮೊಬೈಲ್ ನಲ್ಲಿ ಮೌನೇಶನ ಸ್ನೇಹಿತ ಸಂಗಮೇಶ ಸೆರೆ ಹಿಡಿದಿದ್ದಾನೆ.
ಸರ್ಕಾರಿ ವಸತಿ ಶಾಲೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಸಂಬಂಧಿಕರ ಹೆಸರಿನಲ್ಲಿ ಹೊರಗಡೆ ಕರೆಯಿಸಿ ಕೃತ್ಯ ನಡೆಸಿದ್ದಾರೆ. ತಾಳಿಕಟ್ಟೋ ವೇಳೆ ಬಾಲಕಿ ಪ್ರತಿರೋಧ ಮಾಡಿಲ್ಲಾ. ನವೆಂಬರ್ 24 ರಂದು ನಡೆದಿರೋ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ನಂತರ ತಾಯಿ ತಂದೆಗೆ ವಿಚಾರ ತಿಳಿಸಿದ್ದಾಳೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೌನೇಶ ಹಾಗೂ ಸಂಗಮೇಶ ವಿರುದ್ದ ಪೋಕ್ಸ್ ಪ್ರಕರಣ ದಾಖಲಾಗಿದೆ. ಆರೋಪಿತರು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಆರೋಪಿತರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.
ವರದಿ : ಮಹಿಬೂಬ್ ಗುಂತಕಲ್