ಇಟ್ಟಿಗೆ ಗೂಡಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತಿದ್ದ ತೇಜಮ್ಮ ಕಟ್ಟಿ ಮನಿ ಕಲ್ಲೂರು ಗೆ ಕನ್ನಡ ರಾಜ್ಯೋತ್ಸವ ರತ್ನ ಪ್ರಶಸ್ತಿ

ಇಟ್ಟಿಗೆ ಗೂಡಿನ ಕೂಲಿ ಕಾರ್ಮಿಕರಾಗಿದ್ದ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರು ಮೊದಲು ಶ್ರೀ ಬಸವೇಶ್ವರ ಮಹಿಳಾ ಸ್ವಸಹಾಯ ಸಂಘ ನೊಂದಣಿ ಮಾಡಿಕೊಂಡು ನಂತರ ಉದ್ಯೋಗ ಖಾತರಿ ಕೆಲಸವನ್ನು

ಹೊಸದಾಗಿ ಬಂದಾಗ ಜನರಿಗೆ ಸಂಪೂರ್ಣವಾಗಿ ಪರಿಚಯಿಸಿದ ಕೀರ್ತಿ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರಿಗೆ ಸಲ್ಲುತ್ತದೆ . ಕಲ್ಲೂರು ಗ್ರಾಮ ಪಂಚಾಯತಿಗೆ ಒಳಪಡುವ ಎಲ್ಲ ಹಳ್ಳಿಗಳಲ್ಲಿ ಉದ್ಯೋಗ ಖಾತರಿ ಕೆಲಸ ನಿಂತು ಹೋಗಿದ್ದರೆ . ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ಸಂಪರ್ಕ ಮಾಡಿ ಆ ಹಳ್ಳಿಗಳಲ್ಲಿ ಮತ್ತೆ ಉದ್ಯೋಗ ಖಾತರಿ ಕೆಲಸ ಪ್ರಾರಂಭ ಮಾಡಿಸುವಲ್ಲಿ ಯಶಸ್ವಿ ಯಾಗುತ್ತಾರೆ,

 

ಯಾವುದೇ ಉದ್ಯೋಗ ಖಾತರಿ ಕೂಲಿ ಕಾರ್ಮಿಕರಿಗೆ ಅವರ ಖಾತೆಗೆ ಹಣ ಬಂದಿಲ್ಲ ಎಂದು ಕಾರ್ಮಿಕ ಹೇಳಿದರೆ ಬೆಳಗ್ಗೆ 7 ಗಂಟೆಗೆ ಅವರ ಮನೆಗೆ ಭೇಟಿ ನೀಡಿ ಅವರನ್ನು ಸಮಾಧಾನ ಪಡಿಸಿ ಕಛೇರಿಯ ತೆರೆಯುವ ಸಮಯಕ್ಕೆ ಅವರನ್ನು ಕರೆದುಕೊಂಡು ಹೋಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮತ್ತು ಅದ್ಯಕ್ಷರ ಗಮನಕ್ಕೆ ತಂದು ಅವರ ಖಾತೆಗೆ ಕೂಲಿಯ ಹಣವನ್ನು ಅಧಿಕಾರಿಗಳ ಎದುರಿಗೆ ನಿಂತು ಅವರ ಖಾತೆಗೆ ಹಣ ಜಮ ಮಾಡಿಸುತ್ತಾರೆ ಹಾಗೂ ಕಲ್ಲೂರು ಗ್ರಾಮದಲ್ಲಿ ಹೊಸದಾಗಿ ಮಾತಂಗಿ ಸ್ವಸಹಾಯ ಸಂಘವನ್ನು ಸ್ಥಾಪನೆ ಅದರ ಅಡಿಯಲ್ಲಿ ಮಾತಂಗಿ ದೇವುಸ್ಥಾನವನ್ನು ಉದ್ಯೋಗ ಖಾತರಿ ಕೆಲಸ ಮಾಡಿಕೊಂಡು ಅದರಲ್ಲಿ ಬರುವ ಹಣವನ್ನು ಬಳಸಿಕೊಂಡು ಸ್ವಂತ ಖರ್ಚಿನಲ್ಲಿ ದೇವುಸ್ಥಾನವನ್ನು ಕಟ್ಟುತಿದ್ದಾರೆ,

 

ಲೇಬರ ಕಾರ್ಡು ಕಿಟ್ಟು ಸಾವಿರಾರು ಜನರಿಗೆ ಸ್ವತ ಎದುರಿಗೆ ನಿಂತು ಜನರಿಗೆ ತಲುಪುವಂತೆ ಕೆಲಸ ಮಾಡಿದ ಕೀರ್ತಿ ತೇಜಮ್ಮ ಸಿದ್ರಾಮ ಕಟ್ಟಿಮನಿ ಕಲ್ಲೂರು ಇವರಿಗೆ ಸಲ್ಲುತ್ತದೆ. ಹೀಗೆ ನಿರಂತರವಾಗಿ ಇಡಿ ತಮ್ಮ ಜೀವನವನ್ನೆ ಕಲ್ಲೂರು ಗ್ರಾಮಪಂಚಾಯಿತಿಗೆ ಒಳಪಡುವ ಗ್ರಾಮಗಳ ಜನರ ಸೇವೆಯಲ್ಲಿ ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ,

ಹಾಗೂ ಪಕ್ಕದ ಹಳ್ಳಿಗಳಲ್ಲಿ ಅಂದರೆ ಕಠಳ್ಳಿ . ಗೋರಂಪಳ್ಳಿ ಹಳ್ಳಿಯ ಯಾವುದೇ ಹೆಣ್ಣು ಮಕ್ಕಳಿಗೆ ಕುಟುಂಬದಲ್ಲಿ ಕಿರಿಕಿರಿ ಯಾದರೆ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ.

 

ಇವರ ಈ ಸಮಾಜ ಸೇವೆಯನ್ನು ಗುರುತಿಸಿದ ಬೀದರ ಜಿಲ್ಲೆಯ ಸಂಸ್ಥೆಯಾದ ವೀರ ಕನ್ನಡಿಗರ ಸೇನೆ ವಿಶ್ವ ಕನ್ನಡಿಗರ ಸಂಸ್ಥೆ ( ರಿ ) ಕರ್ನಾಟಕ ರಾಜ್ಯ ಜಿಲ್ಲಾ ಘಟಕ ಬೀದರ್ ವತಿಯಿಂದ ಇದರ ಅದ್ಯಕ್ಷರಾದ ಸುಬ್ಬಣ್ಣ ಕರಕನಹಳ್ಳಿ ಯವರು ದಿನಾಂಕ 29/11/2024 ರಂದು ಇವರನ್ನು ಗುರುತಿಸಿ 69 ನೇ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿಯನ್ನು ನೀಡಿ ಗೌರವವಿಸಿದ್ದಾರೆ.

error: Content is protected !!