ಬೆಳಗಾವಿ :ತಾಯಿ ಆಸೆ ಈಡೇರಿಸಲು ಹೋಗಿ ಜೈಲು ಪಾಲಾದ ಖತರ್ನಾಕ್ ಮಗ ಹಾಗಾದ್ರೆ ತಾಯಿಯ ಆಸೆ ಏನಾಗಿತ್ತು… ಮಗ ಮಾಡಿದ್ದೇನು ಅಂತ ಕೇಳಿದ್ರೆ ನೀವು ಶಾಕ್ ಆಗ್ತಿರಿ ಎಟಿಎಂನಲ್ಲಿ ಲಕ್ಷ್ಯಾಂತರ ರೂ ಹಣ ಕದ್ದು ತಾಯಿಗೆ ಚಿನ್ನಾಭರಣ ಮಾಡಿಸಿಕೊಟ್ಟ ಮಗ.
ಬೆಳಗಾವಿಯ ಕೋರ್ಟ್ ಎದುರಿನ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕಳ್ಳತನ ಮಾಡಿದ ಖತರ್ನಾಕ ತಾಯಿಗೆ ತಕ್ಕ ಮಗ. 8.65 ಲಕ್ಷ ರೂ ಎಗರಿಸಿ 20 ಗ್ರಾಂ ಚಿನ್ನದ ಸರ ಮಾಡಿಸಿ ತಾಯಿಗೆ ಕೊಟ್ಟಿದ್ದ ಖತರ್ನಾಕ್ ಮಗ ಬೆಳಗಾವಿಯ ಜ್ಯೋತಿ ನಗರ ಕೃಷ್ಣಾ ಸುರೇಶ ದೇಸಾಯಿ (23) ಜೈಲು ಪಾಲದ ಯುವಕ.
ಎಚ್‌ಡಿಎಫ್‌ಪಿ ಬ್ಯಾಂಕ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಿದ್ದ ಕೃಷ್ಣಾ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕಸ್ಟೋಡಿಯನ್ ಆಗಿ ಕೆಲಸ ಮಾಡ್ತಿದ್ದ ಕೃಷ್ಣಾ ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲ ಎಚ್‌ಡಿಎಫ್‌ಸಿ ಎಟಿಎಂಗೆ ಹಣ ಹಾಕ್ತಿದ್ದ ಕೃಷ್ಣಾ ಎರಡು ದಿನಗಳ ಹಿಂದೆ ಎಚ್‌ಡಿಎಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ ಕೃಷ್ಣಾ
ಕೆಲ ಹೊತ್ತಿನ ಬಳಿಕ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾನೆ. ಈ ಹಣದಲ್ಲಿ 1.54 ಲಕ್ಷ ಮೌಲ್ಯದ ಚಿನ್ನದ ಸರವನ್ನು ತಾಯಿಗೆ ಕೊಡಿಸಿದ್ದ ಕೃಷ್ಣಾ ಉಳಿದ ಕೆಲ ಹಣದಲ್ಲಿ ಮೋಜು ಮಸ್ತಿ ಮಾಡಿದ್ದ ಕೃಷ್ಣಾ ದೇಸಾಯಿ.
ಹಣ ಹಾಕುವ ಹಾಗೂ ಹಣ ಎಗರಿಸಿ ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣ ಬೇಧಿಸಿ ಚಿನ್ನದ ಸರ, 5.74 ಲಕ್ಷ ಹಣ ಜಪ್ತಿ ಮಾಡಿದ ಮಾರ್ಕೆಟ್ ಠಾಣೆ ಪೊಲೀಸರು.
ವರದಿ : ಸದಾನಂದ