ಹುಮನಾಬಾದ ತಾಲೂಕಿನ ಸಿಂಧನಕೇರಾ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಿಸಿದ ಹುಮನಾಬಾದ ಪುರಸಭೆಯ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಹುಮನಾಬಾದಿಂದ ಬರುವ ಪ್ಲಾಸ್ಟಿಕ್, ಕಸ ಮತ್ತು ಪತ್ತ ಪ್ರಾಣಿಗಳು ತಂದು ಆ ಘಟಕದಲ್ಲಿ ಬಿಸಾಡುತ್ತಿರುವುದರಿಂದ ಗ್ರಾಮದಲ್ಲಿ ಕಲುಷಿತ ವಾತಾವರಣ ನಿರ್ಮಾಣಗೊಂಡಿದೆ. ಮತ್ತು ಗ್ರಾಮದಲ್ಲಿ ಆ ಕಸದಿಂದ ಸೊಳ್ಳೆ ಕಾಟ ಹೆಚ್ಚಾಗಿರುವುದರಿಂದ ಜನರಿಗೆ ಡ್ಯೂಂಗ್ಯ ಜ್ವರ, ಮಲೇರಿಯಾ ಮತ್ತು ಟಿ.ಬಿ.ರೋಗಗಳಿಗೆ ಒಳಗಾಗುತ್ತಿದ್ದಾರೆ.
ಈ ಘಟಕ ಅವೈಜ್ಞಾನಿಕವಾಗಿ ಗ್ರಾಮದಿಂದ ಕೇವಲ 200 ಮೀಟರ್ ದೂರದಲ್ಲಿ ನಿರ್ಮಿಸಿದರಿಂದ ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಆದಕಾರಣ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮುಂಬರುವ ಕರ್ನಾಟಕ ಚಳಿಗಾಲ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಧ್ವನಿ ಎತ್ತಿ ಸರ್ಕಾರದ ಮೇಲೆ ಒತ್ತಡ ಹೇರಿ ಈ ಘಟಕ ಸಿಂಧನಕೇರಾ ಗ್ರಾಮದಿಂದ ವರ್ಗಾವಣೆ ಮಾಡಿ ಸಿಂಧನಕೇರಾ ಗ್ರಾಮದ ವಾತಾವರಣ ಮತ್ತು ಜನರ ಆರೋಗ್ಯ ಕಾಪಾಡಿಕೊಡಬೇಕೆಂದು ಗ್ರಾಮಸ್ಥರು ಕೆಡಿಪಿ ಸಭೆಯಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಗಳಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಶೇಕ್ ಮಕ್ಸುದ್, ಭೀಮ್ ಆರ್ಮಿ ಅಧ್ಯಕ್ಷ ಅನಿಲ್ ದೊಡ್ಡಿ, ಉಮೇಶ್ ದಾಡಗಿ ವಿವಿಧ ಸಂಘಟನೆ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.