ಗೃಹಮಂತ್ರಿ ಅಮಿತ್ ಶಾ ಮೂರ್ಖ , ಬುದ್ಧಿ ಭ್ರಮಣೆ ಆಗಿದೆ ರಮೇಶ ಮಸಾನಿ

ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮದಲ್ಲಿ ದಲಿತ ಸಂಘಟಣೆಗಳ ಹಾಗು ಪ್ರಗತಿಪರ ಚಿಂತಕರ ಒಕ್ಕೂಟ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ , ಮಹಾ ರ್‍ಯಾಲಿಯನ್ನು ಮತ್ತು ಅಮಿತ್ ಶಾ ಪ್ರತಿಕೃತಿ ಸುಟ್ಟು ಹಾಕುವ ಮುಂಖಾತರ ಪ್ರತಿಭಟನೆ ಮಾಡಿದರು. ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ ಮಸಾನಿ ಮಾತನಾಡಿ ಕನಿಷ್ಠ ಜ್ಞಾನವು ಇರದ ಗೃಹಮಂತ್ರಿ ಅಮಿತ್ ಶಾ ಮೂರ್ಖ , ಬುದ್ಧಿ ಭ್ರಮಣೆ ಆಗಿದೆ ಕೂಡಲೇ ರಾಜೀನಾಮೆ ಕೊಟ್ಟು ಭಾರತೀಯರಿಗೆ ಕ್ಷಮೆ ಯಾಚಿಸಬೇಕು ಅವೀವೇಕತನದ ಹೇಳಿಕೆ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳಿಗೆ ರಕ್ತ ಕುದಿಯುವಂತೆ ಮಾಡಿದೆ ಇಂಥ ಹೇಳಿಕೆಯಿಂದ ಅವರ ಕಪಟ ಮನಸ್ಥಿತಿ ಗೊತ್ತಾಗುತ್ತೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು. ಈ ಸಂದರ್ಭದಲ್ಲಿ ಮಾಜಿ ತಾ .ಪಂ ಸದಸ್ಯ ಚಿರಂಜೀವಿ ಪಾಪಯ್ಯ , ಉಪಾಧ್ಯಕ್ಷ ಶ್ರೀಕಾಂತ್ , ಮಾಜಿ ಗ್ರಾಂ .ಪಂ ಅಧ್ಯಕ್ಷ ಗೋಪಾಲ್ ಬೆಗೇರಿ , ಹಾಗು ಗ್ರಾಂ .ಪಂ ಸದಸ್ಯರಾದ ಮಲ್ಲೇಶಮ್ ರೋಮಪಲ್ಲಿ , ರಘುವೀರ್ ಭೀಮಸೈನಿಕ್ , ವೆಂಕಟೇಶಮ್ ತಲರಿ , ನರಸಿಮುಲು ಶಿವಾರೆಡ್ಡಿಪಲ್ಲಿ, ರವಿ ಲಕ್ಷಾಮಸಾಗರ್ , ದಿನೇಶ್ ಕುಂಚಾವರಂ ,ಎಮ್ಯಾನುಯೆಲ್ ಮೊಗದಾಂಪುರ್, ಶಾಂತಪ್ಪ ಪೊಚಾವರಂ , ದಲಿತ ಮುಖಂಡರಾದ ಅಂತಪ್ಪ ರೋಮಪಲ್ಲಿ , ಸಂಜೀವ್ , ಬಿಚ್ಚಪ್ಪ ತಲರಿ , ಅಶೋಕ್ ಮಸಾನಿ ಪೊಚಾವರಂ , ಶ್ರೀನಿವಾಸ್ ಅತೇಲಿ , ಗೋವರ್ಧನ್ ಬೆಳಗೇರಿ , ಅಬ್ದುಲ್ ಕಯ್ಯುಮ್ ಪೊಚಾವರಂ , ಸುದರ್ಶನ್ ಅಂತವರಂ , ತುಕ್ಕರಾಂ ಚಿಂದನೂರ್ , ಬಾಬುರಾವ್ ಜಿಲ್ವರ್ಷ , ರಾಜು ಶಾಧಿಪುರ್ ಮುಂತಾದವರು ಉಪಸ್ಥಿತರಿದ್ದರು.

 

ವರದಿ : ರಾಜೇಂದ್ರ ಪ್ರಸಾದ್ 

error: Content is protected !!