18ನೇ ವರ್ಷದ ಶಬರಿಯಾತ್ರೆ ರಾಕೇಶ್ ಬಸ್ತವಾಡೆ ಗುರು ಸ್ವಾಮಿಗಳು ಇವರಿಂದ

ಹುಕ್ಕೇರಿ ನಗರದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಬಸ್ತವಾಡ ಗಲ್ಲಿ ಹುಕ್ಕೇರಿ ಇವರ ನೇತೃತ್ವದಲ್ಲಿ ಕಳೆದ 17 ವರ್ಷಗಳಿಂದ ಶಬರಿಮಲೆ ಯಾತ್ರೆ ಯಶಸ್ವಿಯಾಗಿ ಪೂರೈಸಿ 18 ನೇ ವರ್ಷದ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಶ್ರೀ ರಾಕೇಶ್ ಅಶೋಕ್ ಬಸ್ತವಾಡೆ

ಗುರುಸ್ವಾಮಿಗಳಿಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದರು26/12/2024ರಂದು ಶ್ರೀ ಅಯ್ಯಪ್ಪ ಸ್ವಾಮಿ ಭಾವಚಿತ್ರ ಭವ್ಯ ಮೆರವಣಿಗೆ ಆನೆ ಕುದುರೆ ಹಾಗೂ ಕುಂಭ ಹೊತ್ತ ಮಹಿಳೆಯರು ಮಕ್ಕಳು ಹಾಗೂ ಕನ್ನಿ ಸ್ವಾಮಿಗಳು ಈ ಮೆರವಣಿಗೆಯಲ್ಲಿ

ಭಾಗವಹಿಸಿದ್ದರು ನಾಳೆ ಶುಕ್ರವಾರ ಸಾಯಂಕಾಲ 6:00ಗೆ ಹುಕ್ಕೇರಿ ಬೈಪಾಸ್ ರೋಡ್ ಲಕ್ಷ್ಮಿ ಗುಡಿಯ ಆವರಣದಲ್ಲಿ ಹಾಕಿದ ವಿಶೇಷ ಮಂಟಪದಲ್ಲಿ ಅಗ್ನಿ ಪೂಜೆ ಹಾಗೂ ಮಹಾಪೂಜೆ ಮತ್ತು ಅನ್ನಪ್ರಸಾದ ಕಾರ್ಯಕ್ರಮ ಜರುಗಲಿದ್ದು ಈ ಭವ್ಯ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸುತ್ತಿರುವ ಅಯ್ಯಪ್ಪ ಸ್ವಾಮಿ

ಮಾಲಾಧಾರಿಗಳು, ಗುರುಸ್ವಾಮಿಗಳು, ಹಾಗೂ ಮಠಾಧೀಶರು, ಗಣ್ಯ ಮಾನ್ಯರು, ಮುಖಂಡರು, ಸಮಸ್ತ ಹುಕ್ಕೇರಿಯ ಮಹಿಳೆಯರು ಮಕ್ಕಳು ಯುವಕರು ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

 

ವರದಿ : ಸದಾನಂದ ಎಚ್ 

error: Content is protected !!