ಮಾಜಿ ಪ್ರಧಾನಿ ಡಾ ಮನಮೋಹನ ಸಿಂಗ್ ರವರಿಗೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಗೃಹ ಕಚೇರಿಯಲ್ಲಿ ಮುಖಂಡರಿಂದ ಶ್ರದ್ಧಾಂಜಲಿ ಭಾವಚಿತ್ರಕ್ಕೆ ಪುಷ್ಪ ನಮನ

ಭಾರತದ ಮಾಜಿ ಪ್ರಧಾನ ಮಂತ್ರಿಗಳು, ಆರ್ಥಿಕ ತಜ್ಞರಾದ ಡಾ. ಮನಮೋಹನ ಸಿಂಗ್ ರವರ ನಿಧನದ ಪ್ರಯುಕ್ತ ಇಂದು ಹುಮನಾಬಾದ ಪಟ್ಟಣದಲ್ಲಿ ಮಾಜಿ ಸಚಿವರಾದ  ರಾಜಶೇಖರ ಬಿ ಪಾಟೀಲ ರವರ ಗೃಹ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹುಮನಾಬಾದ ರವರ ವತಿಯಿಂದ ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ದಿ. ಡಾ. ಮನಮೋಹನ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಆಚರಿಸಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ ಅಭಿಷೇಕ ಆರ್ ಪಾಟೀಲ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಫ್ಸರ್ ಮಿಯಾ, ಓಂಕಾರ ತುಂಬಾ, ಯುವ ಕಾಂಗ್ರೇಸ್ ಅಧ್ಯಕ್ಷರಾದ ಉಮೇಶ ಜಮಗಿ, ಪುರಸಭೆ ಉಪಾಧ್ಯಕ್ಷರಾದ ಮುಕ್ರಂ ಜಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾಶೆಟ್ಟಿ, ಕಂಟೇಪ್ಪಾ ದಾನಾ, ಸಿದ್ರಾಮ ವಾಘಮಾರೆ, ಪುರಸಭೆ ಸದಸ್ಯ ದತ್ತು ಲದ್ದಿ, ಸೈಯದ್ ಯಾಶೀನ್, ಸುರೇಶ ಘಾಂಗ್ರೆ, ಹುಲ್ಲೆಪ್ಪಾ ರಟಕಲ್, ಧರಮರೆಡ್ಡಿ, ನರಸಪ್ಪಾ ಪರಸನೋರ, ವಿಜಯಕುಮಾರ ಶಿವಪೂರ, ಅಶೋಕ ಸೊಂಡೆ, ಶಿವಕುಮಾರ ಪರೀಟ, ರಾಖೇಶ ಕೌಡಿಯಾಳ, ರಾಜಕುಮಾರ ಲಗೋಂಡ, ರವಿ ಘವಳಕರ್, ರಾಹುಲ ಉದ್ಘಾ, ಯಾಸೀರ್, ವೈಜಿನಾಥ ಡಾಂಗೆ, ಗುಂಡಪ್ಪಾ ಧನಗರಗಡ್ಡ, ಗುಂಡಪ್ಪಾ ಹೊನ್ನಕೇರಿ, ಜೈರಾಜ ಸದಲಾಪೂರೆ, ಖಾಲೀದ್, ಮತ್ತು ಪಕ್ಷದ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

error: Content is protected !!