ಮನ ಮೋಹಕ ಸಿಂಗ್ .

ತುಂಬಿದ ಕೊಡ

ತುಳುಕುವುದಿಲ್ಲ…

ಖಾಲಿ ಡಬ್ಬಗಳು ಸದ್ದು

ಹೆಚ್ಚು ಮಾಡುತ್ತಿದೆಯಲ್ಲ…!

 

ದೇಶದ ಇಷ್ಟ

ಮನಸ್ಸಲ್ಲೇ ಮಾತನಾಡಿದಿರಿ..

ಮನ ಮೋಹನ

ಅರ್ಥವ ಅರ್ಥ ಮಾಡಿಸಿದಿರಿ….

 

ಜಗಕ್ಕೇ ವಿತ್ತ ಕುತ್ತು ಬಂದಾಗ

ಮೌನಿಯಾಗಿ ಕತ್ತಲಲ್ಲಿ

ರಾಷ್ಟಕ್ಕೆ ಹಣ ಹಣತೆ ಹಚ್ಚಿದಿರಿ..

ಆರ್ಥಿಕತೆ ಸರಿ ಹೊಂದಿಸಿದಿರಿ…..

 

ಮಾತು ಬೆಳ್ಳಿ, ಮೌನ ಬಂಗಾರ ”

ಗಾದೆ ಮಾತಿನ ಅನ್ವರ್ಥ ಸರ್ದಾ(ರ್ )ರ..

ಅರ್ಥ ಶಾಸ್ತ್ರದ ಬೃಹತ್ ಗ್ರಂಥ.

ನೀವು ಕಲಿತದ್ದು ಕಲಿಸಿದ್ದು ಅನಂತ….

 

ಮಾತು ಆಡಿದರೆ ಹೋಯಿತು

ಮುತ್ತು ಒಡೆದರೆ ಹೋಯಿತು..

ಮೌನ ನಿಮ್ಮನ್ನು ಗಗನಕ್ಕೆ ಏರಿಸಿತು

ಮಾತು ಅದೆಷ್ಟೋ ಜನರ ಪಾತಾಳಕ್ಕೂ ಇಳಿಸಿತು…

 

ಮಾತಿನ ವಿಷಯ

ಬಂದಾಗ ಮೌನಕ್ಕೂ ಅಷ್ಟೇ ಪ್ರಾಶಸ್ತ್ಯ..

ಮಾಡುವರು ಇಲ್ಲಿ

ದ್ವೇಷ ಮಾತಿನಲಿ ದೇಶ ಶಕ್ತಿಯ ವ್ಯಯ…

 

ಮೌನ ತಪಸ್ಸಿನ ಸನ್ಯಾಸಿ,

ಋಷಿ ಮುನಿಯೋ ನಾನರಿಯೆ..

ಮೌನಿ ಯಾಗಿದ್ದ ನೀವು

ಮತ್ತೇ ಮೌನಿಯಾದದ್ದು ಸರಿಯೇ .. ????

error: Content is protected !!