ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೂತನ ಪದಾಧಿಕಾರಿಗಳ ಆಯ್ಕೆ

ಹುಮನಾಬಾದ : ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕಾ ಶಾಖೆ ಕಛೇರಿ, ಟೀಚರ್ ಕಾಲೋನಿ ಹುಮನಾಬಾದ ತಾಲೂಕ ಕಾರ್ಯಕಾರಿ ಮಂಡಳಿ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ದಲಿತ ಸಮಾಜದ ಹಿರಿಯರಾದ ಕೃಷ್ಣಪ್ಪ ಹಾಳಗೋರ್ಟೆ ರವರು ಅಧ್ಯಕ್ಷತೆ ವಹಿಸಿದ್ದರು.

 

ಕೆಳಕಂಡಂತೆ ನೂತನವಾಗಿ ತಾಲೂಕ ಸಮಿತಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

 

ತಾಲೂಕಾ ಸಂಚಾಲಕರಾಗಿ- ರಾಹುಲ್ ಉದ್ದಾ ದುಬಲಗುಂಡಿ, ಸಂಘಟನಾ ಸಂಚಾಲಕರುಗಳಾಗಿ ಸುಧಾಕರ ಶಿಂಧೆ, ತುಕಾರಾಮ ಮುಸ್ತಾಪೂರೆ, ಶಾಂತಕುಮಾರ ಅರಳ್ಳಿ, ಮೊಹನ ಹುಡಗಿ, ಬಲಭೀಮ ಶಿಂಧೆ, ಸುಧಾಕರ ಸಂಗಮ್, ಸಂತೋಷ ಅತಿವಾಳ, ರವಿಚಂದ್ರ ಸಂಗಮ್, ಅರ್ಜುನ ಚೀನಕೇರಿ, ವಿನೋದ ಮೇಲಕೇರಿ, ಶ್ರೀನಿವಾಸ ಕಟ್ಟಿಮನಿ, ರಾಹುಲ್ ಹಳಗೋರ್ಟೆ, ಖಜಾಂಚಿಯಾಗಿ – ಚಂದ್ರಶೇಖರ ಮಾಲೆ, ಮಹಿಳಾ ಘಟಕದ ಸಂಚಾಲಕಿಯಾಗಿ – ಸುಲೆಮ್ಮಾ ದಂಡೆ, ವಿದ್ಯಾರ್ಥಿ ಘಟಕದ ಸಂಚಾಲಕರಾಗಿ- ಅವಿನಾಶ ಮೇಲಕೇರಿ, ಅಲ್ಪಸಂಖ್ಯಾತ ಘಟಕದ ಸಂಚಾಲಕರಾಗಿ – ನಾಸೀರ್ ಸೌದಾಗರ್ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ- ಪ್ರಕಾಶ ಗಡವಂತಿ, ಪ್ರಭು ಮಾಳನಾಯಕ್, ನೀಲಕಂಠ ಡೊಳ್ಳೆ, ಭರತ್ ಭಾಗ್ಯಕರ್, ಈಶ್ವರ ಮೆಲಕೇರಿ, ಶಿವರಾಜ ಸಿಂಧನಕೇರಾ, ಮಹಾಂತೇಶ ಕುಂದನ್, ನೀಲಕಂಠ ಶೆಟ್ಟಿ, ಅಮರ ಉತ್ತಮಕರ, ಮಹೇಶ ಕ್ಯಾದೆ, ಸುನೀಲ ಕಟ್ಟಿಮನಿ ಆಯ್ಕೆಯಾಗಿದ್ದಾರೆ.

 

ಸದರಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ – ರಮೇಶ ಮಂದಕನಳ್ಳಿ, ವಿಭಾಗಿಯ ಸಂಚಾಲಕರಾದ – ರಾಜಕುಮಾರ ಬನ್ನೇರೆ, ಪ್ರಭು ಚಿತ್ತಕೋಟಾ, ರಂಜೀತಾ ಜೈನೂರ್, ವಿಠಲ್ ಲಾಡಕರ್, ವಿಶಲ್ ಲಾಡಕರ್, ಬಾಬುರಾವ ಮಾಲೆ, ತುಕಾರಾಮ ಲಾಡಕರ್, ಸಿದ್ದಾರ್ಥ ಕಾಂಬಳೆ, ಕೈಲಾಸ ಮೇಟಿ ಉಪಸ್ಥಿತರಿದ್ದರು.

error: Content is protected !!