ಎನ್ ಎಸ್ ಎಸ್ ವಿಶೇಷ ಶಿಬಿರ್ ಕಾರ್ಯಕ್ರಮವನ್ನು ಖಜಾನೆ ಅಧಿಕಾರಿ ವೆಂಕಟಪ್ಪ ಉದ್ಘಾಟನೆ

ಚಿಟಗುಪ್ಪಾ: ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಬಾಲಕಿರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವತಿಯಿಂದ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಶ್ರೀ ಸಂತ ಶಿರೋಮಣಿ ಮಡಿವಾಳೇಶ್ವರ ಗವಿ ದೇವಸ್ಥಾನದಲ್ಲಿ ಜ.7 ರಂದು ಖಜಾನೆ ಅಧಿಕಾರಿ ವೆಂಕಟಪ್ಪ ಉದ್ಘಾಟಿಸಿದರು. ವಿದ್ಯಾರ್ಥಿಗಳು ಅಭ್ಯಾಸದ ಜೊತೆಗೆ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಮತ್ತು ಎನ್ ಎಸ್ ಎಸ್ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿರುವ ಅಸ್ಲಾಂಮಿಯ್ಯಾ ಇಂದಿನ ಮಕ್ಕಳು ನಾಳಿನ ದೇಶದ ಭವಿಷ್ಯ ಕಟ್ಟುವವರು ವಿದ್ಯಾರ್ಥಿಗಳು ಸೇವೆ ಮಾಡಬೇಕು ಗುರು ಹಿರಿಯರನ್ನ ಗೌರವಿಸಬೇಕು ಎಂದು ಮಾತನಾಡಿದರು.ಇದೆ ಸಂದರ್ಭದಲ್ಲಿ ವೆಂಕಟಪ್ಪ, ರಾಜೇಂದ್ರ ಚೌಹಾಣ್, ಶಿವುಕುಮಾರ, ಡಾ. ಅರುಣಕುಮಾರ್, ನಿಜಾಮ, ಚಂದ್ರಕಾಂತ್, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಮೋಯಿಜೊದ್ದೀನ್, ಅಂಬಿಕಾ, ಜ್ಞಾನೇಶ್ವರಿ, ಶಕುಂತಲಾ, ಶಿಬಿರಾರ್ಥಿಗಳು ಇದ್ದರು. ಮಾನಸ ಪ್ರಾರ್ಥಿಸಿದರು, ಅಕ್ತರ್ ಬೇಗಂ ಸ್ವಾಗತ ಗೀತೆ ನೆರವೇರಿಸಿದ, ಮೋಯಿಜೋದ್ದಿನ್ ಸ್ವಾಗತಿಸಿದರು, ಡಾ.ಅರುಣಕುಮಾರ್ ವಂದಿಸಿದರು, ಶಿವಕುಮಾರ್ ನಿರೂಪಿಸಿದರು.

error: Content is protected !!