ಅಪಘಾತದಲ್ಲಿ ಹತ್ತು ಜನ ಪ್ರಾಣ ಕಳೆದುಕೊಂಡಿದ್ದು ನೋವಿನ ಸಂಗತಿ: ಭೀಮಣ್ಣ  ನಾಯ್ಕ

ಯಲ್ಲಾಪುರದಲ್ಲಿ ನಡೆದ ಲಾರಿ ಅಪಘಾತದ ಸುದ್ದಿ ಕೇಳಿ ಮನಸ್ಸಿಗೆ ಬಹಳ ನೋವಾಯಿತು

ಬಾಳಿ ಬದುಕ ಬೇಕಾದ ಯುವ ಜೀವಗಳು ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ

ನಾನು ವಿದೇಶದಲ್ಲಿ ಇರುವುದರಿಂದ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ.

ಜನವರಿ 26 ಕ್ಕೆ ವಿದೇಶದಿಂದ ಮರಳಿದ ನಂತರ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತೇನೆ ಮತ್ತು ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಜವಾಬ್ದಾರಿಯುತ ಜನ ಪ್ರತಿನಿದಿಯಾಗಿ ಸವಣೂರ ತಾಲೂಕಿನ ಮೃತ ಮತ್ತು ಗಾಯಾಳುಗಳ ಕುಟುಂಬದ ಜೊತೆ ನಿಲುತ್ತೆನೆ.

ನೊಂದ ಕುಟುಂಬಗಳು ದೃತಿಗೆಡ ಬಾರದು, ಇಡೀ ಸರ್ಕಾರ ಆ ಕುಟುಂಬಗಳ ಜೊತೆಗಿದೆ. ವಿದೇಶದಿಂದ ಬಂದ ನಂತರ ಕುದ್ದಾಗಿ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ‌ ಹೇಳುವುದರ ಜೊತೆಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ.

ಈ ಘಟನೆ ನಡೆದಾಗ ಮಾನವೀಯ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಹಾಗೂ ಯಲ್ಲಾಪುರ ತಾಲೂಕ ಆಸ್ಪತ್ರೆ ಸಿಬ್ಬಂದಿಗಳಿಗೆ, ಅಂಬ್ಯುಲೆನ್ಸ್ ಚಾಲಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ..

ಈ ದುರ್ಘಟನೆಯಲ್ಲಿ ಗಾಯಗೊಂಡವರು ಶೀರ್ಘ ಗುಣಮುಖರಾಗಲಿ ಮತ್ತು ಮೃತ ಆತ್ಮಗಳಿಗೆ ಶಾಂತಿ ದೊರಕಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಭಗವಂತ ನೊಂದ ಕುಟುಂಬಗಳಿಗೆ ಧೈರ್ಯ ನೀಡಲಿ.

ಇನ್ನು ಇತ್ತಿಚಿಗೆ ಚಾಮರಾಜಪೇಟೆ ಮತ್ತು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗೋವು ಹತ್ಯೆ ಮಾಡಿ ವಿಕೃತಿ ಮೆರೆದಿರುವ ಘಟನೆ ಖಂಡನೀಯ. ಪೊಲೀಸ್ ಇಲಾಖೆ ಅಪರಾಧಿಗಳನ್ನು ಕೂಡಲೇ ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೆನೆ. ಹಾಗೂ ಸಮಾಜದಲ್ಲಿ ಪುನಃ ಇಂತಹ ಘಟನೆಗಳು ಜರುಗದಂತೆ ಇಲಾಖೆ ಕಟ್ಟೆಚ್ಚರ ವಹಿಸತಕ್ಕದ್ದು.ಮತ್ತು ವಾರಸುದಾರರಿಲ್ಲದ ಬಿಡಾಡಿ ದನಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ಸೇರಿಸಲು ನನ್ನ ವಿಧಾನಸಭಾ ವ್ಯಾಪ್ತಿಯ ನಗರಸಭೆ/ಪಟ್ಟಣ ಪಂಚಾಯತ/ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಸೂಚಿಸಿದೆನೆ ಎಂದು ಭಿಮಣ್ಣ ಟಿ ನಾಯ್ಕ ಶಾಸಕರು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

error: Content is protected !!