ಔರಾದ್ : ಔರಾದನಿಂದ ಸಂತಪೂರ, ಮುಸ್ತಾಪೂರ ಮೂಲಕ ಬೀದರಗೆ ತೆರಳುತ್ತಿದ್ದ ಬೀದರ ಸಾರಿಗೆ ಘಟಕದ ನಿರ್ವಾಹಕ ಮಹಿಳಾ ಪ್ರಯಾಣಿಕರ ಜತೆ ಅನುಚಿತ ವರ್ತನೆ ತೋರಿಸಿದ್ದಾರೆ. ಪಟ್ಟಣದ ಕನ್ನಡಾಂಬೆ ವೃತ್ತದ ಬಳಿಯ ನಿಲ್ದಾಣದಲ್ಲಿ ಬೀದರ ಸಾರಿಗೆ ಘಟಕದ ಬಸ್ ಸಂಖ್ಯೆ KA 38 F936 ಬಂದಿದ್ದು, ಮಹಿಳೆಯರು ಬಸ್ ನಲ್ಲಿ ಹತ್ತಿದ ಬಳಿಕ ನಿರ್ವಾಹಕ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಪ್ರಯಾಣಿಕರು ನಿರ್ವಾಹಕನಿಗೆ ತರಾಟೆ ತೆಗೆದುಕೊಂಡ ಪ್ರಸಂಗ ಕುಡಾ ನಡೆಯಿತು.
ನಿರ್ವಾಹಕನ ದರ್ಪಕ್ಕೆ ಮಹಿಳಾ ಪ್ರಯಾಣಿಕರು ಕಣ್ಣೀರು ಹಾಕಿದ್ದಾರೆ. ಬಸ್ ಮೆಟ್ಟಲು ಹತ್ತಿ ಒಳಗೆ ಬಂದಾಗ ನಿರ್ವಾಹಕ ಬೇಕು ಅಂತಲೆ ನಮಗೆ ಹಾಗೂ ಕುಟುಂಬದವರನ್ನು ನಿಂದಿಸಿದ್ದಾರೆ. ಸಾರಿಗೆ ಇಲಾಖೆಯ ಬಸ್ ಗಳಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ. ಆದರೆ ಇಂತಹ ಕೆಲ ನಿರ್ವಾಹಕರಿಂದ ಮಹಿಳೆಯರು ಹೆದರುವಂತಾಗಿದೆ ಎಂದು ಮಹಿಳಾ ಪ್ರಯಾಣಿಕರು ನಿರ್ವಾಹಕನ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಮೇಲಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನಿರ್ವಾಹಕನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ವರದಿ : ರಾಚಯ್ಯ ಸ್ವಾಮಿ