ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷರಾಗ್ಲಿ ಎಂದು ಅಭಿಮಾನಿಗಳಿಂದ ವಿಶೇಷ ಪೂಜೆ

ಕುಂಭಮೇಳದಲ್ಲಿ ಬಸನಗೌಡ ಪಾಟೀಲ ಯತ್ನಾಳ ಭಾವಚಿತ್ರ ಮುಳುಗು ಹಾಕಿ ಪ್ರಾರ್ಥನೆ

 

ವಿಜಯಪುರ: ಪ್ರಯಾಗರಾಜ್ ಕುಂಭಮೇಳದಲ್ಲಿ ಮೊಳಗಿದ ಬಿಜೆಪಿ ರಾಜ್ಯಾಧ್ಯಕ್ಷ ಕೂಗು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯಾಧ್ಯಕ್ಷರಾಗ್ಲಿ ಮುಂದೆ ಮುಖ್ಯಮಂತ್ರಿ ಆಗಲೆಂದು ಗಂಗಾ ನದಿಯಲ್ಲಿ ವಿಶೇಷ ಪೂಜೆ..ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಬಿಜೆಪಿ ರಾಜ್ಯಾಧ್ಯಕ್ಷರಾಗಲಿ ಹಾಗೂ ಮುಂದೆ ಮುಖ್ಯಮಂತ್ರಿಗಳಾಗಲೆಂದ ಅವರ ಅಭಿಮಾನಿಗಳು ಪ್ರಯಾಗ್ ರಾಜ ಗಂಗಾ ನದಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ

 

ತ್ರಿವೇಣಿ ಸಂಗಮದಲ್ಲಿ ಯತ್ನಾಳ ಭಾವ ಚಿತ್ರವನ್ನು ಐದು ಬಾರಿ ಮುಳುಗಿಸಿ, ಹರಹರ ಮಹಾದೇವ ಎಂದು ಘೋಷಣೆ ಮೊಳಗಿಸಿದರು.

ಪ್ರಯಾಗ್‌ರಾಜ್ ಶಾಹಿಸ್ನಾನ ಪರ್ವಕಾಲ ಮುಗಿಯುತ್ತ ಬರುತ್ತಿದ್ದಂತೆಯೇ ಕರ್ನಾಟಕದಿಂದ ಸಹಸ್ರಾರು ಭಕ್ತರು ತೆರಳುತ್ತಲಿದ್ದಾರೆ. ಆದರೆ ವಿಜಯಪುರದ ಅಭಿಮಾನಿಗಳು ಅಲ್ಲಿಗೆ ತೆರಳುವಾಗ ತಮ್ಮ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರದೊಂದಿಗೆ ತೆರಳಿದ್ದರು.

ಕೇಂದ್ರದ ಮಾಜಿ ಸಚಿವರು ಹಾಗೂ ಶಾಸಕರೂ ಆಗಿರುವ ಬಸನಗೌಡ ಪಾಟೀಲ ಯತ್ನಾಳರಿಗೆ ದೊರೆಯಬೇಕಾದ ಸ್ಥಾನಮಾನ ದೊರೆತಿಲ್ಲ. ನಿಷ್ಟೂರ ಮತ್ತು ಪ್ರಮಾಣಿಕರಾಗಿ ಹಿಂದುತ್ವದ ಪ್ರತಿಪಾದಕರಾದ ಮೇಲಸ್ತರದ ಸ್ಥಾನಮಾನಗಳು ದೊರೆಯಬೇಕು. ‘ಈ ಹಿನ್ನೆಲೆಯಲ್ಲಿ ತಾವು ಪ್ರಾರ್ಥನೆ ಸಲ್ಲಿಸಿದ್ದೇವೆ.ಎಂದು ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ನಂದು ಗಡಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿಜಯಪುರ ನಗರದ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ ಕೂಡಗಿ, ವಿಜಯ ಬೋಸಲೆ, ವಿವೇಕ ಬೈರಗೊಂಡ, ಸಂತೋಷ ಅವರು ನದಿಯಲ್ಲಿ ಶಾಸಕ ಯತ್ನಾಳ ಅವರ ಭಾವಚಿತ್ರದೊಂದಿಗೆ ಪ್ರಾರ್ಥನೆ ಮಾಡಿದ್ದಾರೆ.

error: Content is protected !!