ಶಾಸಕರಾದ ಮಾನೆ ಶ್ರೀನಿವಾಸ ಅವರು ಇಂದು ಸುರಳೇಶ್ವರ ಗ್ರಾಮದಲ್ಲಿ ಕುಂಟನಹೊಸಳ್ಳಿ, ಸುರಳೇಶ್ವರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಪೂರ್ಣ ಹಾಳಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ಒಂದು ಕೋಟಿ 46 ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಚಾಲನೆ ನೀಡಿದ್ದರಿಂದ ಸುತ್ತಲಿನ ಗ್ರಾಮಸ್ಥರು ಸಂತಸಗೊಂಡರು. ಕೆಲವೇ ದಿನಗಳಲ್ಲಿ *ಹಾನಗಲ್* ನಗರದಲ್ಲಿ ಆರಂಭವಾಗಲಿರುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ರಸ್ತೆ ತಾತ್ಕಾಲಿಕವಾಗಿ ಬೈಪಾಸ್ ರಸ್ತೆಯಾಗಿ ಬಳಕೆಯಾಗಲಿದೆ.
ಇದೇ ಸಂದರ್ಭದಲ್ಲಿ ಸುರಳೇಶ್ವರ ಗ್ರಾಮಸ್ಥರ ಅಹವಾಲುಗಳನ್ನು ಮಾನೆ ಶ್ರೀನಿವಾಸ ಅವರು ಆಲಿಸಿದರು. ಸ್ಮಶಾನ ಒತ್ತುವರಿ, ವಿವಿಧ ಓಣಿಗಳಲ್ಲಿ ಸಿಸಿರಸ್ತೆ ನಿರ್ಮಾಣ ಮಾಡುವ ಮನವಿಗೆ ಸ್ಪಂದಿಸಿದರು.