ಸಂಕೇಶ್ವರ ಹೀರಾ ಶುಗರ್ ಸಕ್ಕರೆ ಕಾರ್ಖಾನೆಯಿಂದ ಪ್ರತಿಯೊಬ್ಬ ಮೆಂಬರಿಗೆ 50 ಕೆಜಿ ಸಕ್ಕರೆ ವಿತರಣೆ

ಸಂಕೇಶ್ವರ್ : ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಅನ್ನಾ ಸಾಹೇಬ್ ಜೊಲ್ಲೆ ಮಾಜಿ ಸಂಸದರು ಹಾಗೂ ಸನ್ಮಾನ್ಯ ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಭಾವಿ ಮತಕ್ಷೇತ್ರ ಇವರ ನೇತೃತ್ವದಲ್ಲಿ

2024-25 ನೇ ಸಾಲಿನ ಹಂಗಾಮಿನಲ್ಲಿ ಪ್ರತಿಯೊಬ್ಬ ಕಾರ್ಖಾನೆ ಸದಸ್ಯರಿಗೆ ಪ್ರತಿ ವರ್ಷ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಿಸಲಾಗಿದ್ದು ಮೂರು 20 25 ರಿಂದ ಡಿಸೆಂಬರ್ ಕೊನೆಯವರೆಗೆ ಕಾರ್ಖಾನೆ ವರ್ಗದ ಸದಸ್ಯರಿಗೆ ಪ್ರತಿ ಕೆಜಿಗೆ 17 ರೂಪಾಯಿ ದರ ನಿಗದಿ ಐವತ್ತು ಕೆಜಿ ಸಕ್ಕರೆ ವಿತರಿಸಲಾಗುವುದೆಂದು ಕಾರ್ಖಾನೆಯ ಅಧ್ಯಕ್ಷರಾದ ಶ್ರೀ ಬಸವರಾಜ್ ಕಲ್ಲಟ್ಟಿ ಇವರು ಕಾರ್ಖಾನೆ ಸಭಾ ಗ್ರಹದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಹಾಗೂ ಕಬ್ಬು ಪೂರೈಸಿದ ರೈತರಿಗೆ 17 ರೂಪಾಯಿ ಸಕ್ಕರೆಯನ್ನು ಏಪ್ರಿಲ್ ಒಂದರಿಂದ ಸೆಪ್ಟೆಂಬರ್ 30ರವರೆಗೆ ವಿತರಿಸಲಾಗುವುದು ಹಾಗೂ ಕಬ್ಬು ಪೂರೈಸಿದ ರೈತರಿಗೆ ಮಾರ್ಚ್ 31ರ ಒಳಗಾಗಿ ಸಕ್ಕರೆ ಸ್ಲೀಪ್ ಗಳನ್ನು ಪೂರೈಸಲಾಗುವುದೆಂದು ತಿಳಿಸಿದರು..
20 25 ಹಾಗೂ 26 ನೇ ಸಾಲಿನ ಕಬ್ಬು ಕಡಿಯುವ ಹಾಗೂ ಸಾರಿಗೆ ಮುಕ್ತದಾರರಿಗೆ ನೇರ ಹೊರೆಯ ಕಾರ್ಖಾನೆಗಳು ನೀಡುವ ದರದಂತೆ ನಮ್ಮ ಕಾರ್ಖಾನೆಯೂ ಕೂಡ ದರ ನೀಡಲು ಬದ್ಧವಾಗಿದೆ ಎಂದು ತಿಳಿಸಿದರು ಕಾರ್ಖಾನೆಯ ಕಬ್ಬು ಬೆಳೆಗಾರರಿಗೆ ತೊಂದರೆ ಆಗದಂತೆ ಹೆಚ್ಚಿನ ಪ್ರಮಾಣದಲ್ಲಿ ಬಾಂಡ್ ಮಾಡಲು ಕರೆ ನೀಡಿದರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಪೂರೈಸುವಂತೆ ವಿನಂತಿಸಿಕೊಂಡರು ಸದರಿ ಸಾಲಿನಲ್ಲಿ ಕಾಂಪೋಸ್ಟ್ ಗೊಬ್ಬರದರ ಪ್ರತಿ ಟನ್ನಿಗೆ 1500 ಇದ್ದುದ್ದನ್ನು ಈಗ ಪ್ರತಿ ಮ್ಯಾಟ್ರಿಕ್ ಟನ್ಗೆ ರೂ.1000 ದರ ಘೋಷಣೆ ಮಾಡಿದೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿ ರೈತರಿಗೆ ಮುಟ್ಟಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಮಾಧ್ಯಮದವರ ಮುಂದೆ ಹೇಳಿದರು ಮತ್ತು 20 24 ಹಾಗೂ 25 ನೇ ಸಾಲಿನ ಕಬ್ಬು ಪೂರೈಸಿದ ಎಲ್ಲಾ ಕಬ್ಬು ಪೂರೈಕೆದಾರರಿಗೆ ಏಪ್ರಿಲ್ ಮೊದಲನೇ ವಾರದಲ್ಲಿ ಉಳಿದ ಎಲ್ಲಾ ಕಬ್ಬಿನ ಬಿಲ್ಲುಗಳನ್ನು ಸಂದಾಯ ಮಾಡಲಾಗುವುದು ಮತ್ತು 25 26ನೇ ಹಂಗಾಮಿಗೆ ಕಬ್ಬು ಪೂರೈಕೆದಾರರಿಗೆ ಪ್ರತಿ 15 ದಿವಸಗಳಿಗೊಮ್ಮೆ ಕಬ್ಬು ಬಿಲ್ ಸಂದಾಯ ಮಾಡಲು ಆಡಳಿತ ಮಂಡಳಿ ಬದ್ಧವಾಗಿರೂವಾದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಕಾರ್ಖಾನೆ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ ಅನ್ನಾ ಸಾಹೇಬ್ ಜೊಲ್ಲೆ ಮಾಜಿ ಸಂಸದರು ಹಾಗೂ ಅರಭಾವಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಬಾಲಚಂದ್ರ ಜಾರಕಿಹರ್ ಅವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಾರ್ಖಾನೆ ಸದಸ್ಯರಿಗೆ ಹಾಗೂ ಕಾರ್ಮಿಕ ಬಾಂಧವರಿಗೆ ಯಾವುದೇ ರೀತಿಯ ಅಡಚಣೆ ಯಾಗದಂತೆ ಸುವಸ್ಥಿತವಾಗಿ ಕಾರ್ಖಾನೆಯನ್ನು ನಡೆಸಿಕೊಂಡು ಹೋಗುವುದಾಗಿ ಕಾರ್ಖಾನೆಯ ಚೇರ್ಮನ್ ಅವರು ತಿಳಿಸಿದರು ಈ ಸಂದರ್ಭದಲ್ಲಿ ಹಿರಾ ಸುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಬಸವರಾಜ ಕಲ್ಲಟ್ಟಿ.

ಉಪಾಧ್ಯಕ್ಷರಾದ ಅಶೋಕ್ ಪಟ್ಟಣಶೆಟ್ಟಿ.
ಹಾಗೂ ಕಾರ್ಖಾನೆ ಸಂಚಾಲಕರಾದ ಶಿವ ನಾಯಕ್ ನಾಯಕ್. ಪ್ರಭುದೇವ್ ಪಾಟೀಲ್ ಬಸಪ್ಪ ಮರಡಿ ಬಾಳಸಾಹೇಬ ಅರಬೋಳೆ ಸುರೇಂದ್ರ ದೊಡ್ಡಿನ್ನವರ್ ವ್ಯವಸ್ಥಾಪಕ ನಿರ್ದೇಶಕರಾದ ಸತ್ಯಪ್ಪ ಕರ್ಕಿ ನಾಯಕ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಚ್

error: Content is protected !!