ಕರ್ನಾಟಕ ಸರಕಾರ ಲಿಂಗೈಕ್ಯ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಜಯಂತಿ ಆಚರಣೆ ಮಾಡಬೇಕು: ಶರಣು ಪಾಟೀಲ

ಪದ್ಮಭೂಷಣ, ಗಾನಯೋಗಿ, ಗಾನ ಗಂಧರ್ವ, ಪಂಚಮ ಕೋಗಿಲೆ ಡಾ. ಪಂಡಿತ ಪುಟ್ಟರಾಜ ಗವಾಯಿಗಳು, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪಾರವಾದ ಸಾಧನೆ ಮಾಡಿದ ಮಹಾನ್ ಯೋಗಿಗಳು. ಇವರು ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತದಲ್ಲಿ ಪ್ರಾವಿಣ್ಯತೆ ಪಡೆದುಕೊಂಡು, ಕನ್ನಡ, ಸಂಸ್ಕೃತ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರಭುತ್ವವನ್ನು ಸಾಧಿಸಿದ ತ್ರಿಭಾಷಾ ಪಂಡಿತರು ಹಾಗೂ ಮಹಾನ್ ಯೋಗಿಗಳು, ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆಯ ದಿನವಾದ ಮಾರ್ಚ್ 3 ರಂದು ಸರಕಾರ ಅವರ ಜಯಂತಿ ಆಚರಣೆಗೆ ಆದೇಶ ಹೊರಡಿಸಬೇಕು.

ಪಂಡಿತ ಪುಟ್ಟರಾಜ ಗವಾಯಿಗಳು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ಮಹಾನ್ ಸಂತರು. ಸಾಹಿತ್ಯ, ಸಂಗೀತ, ಆಧ್ಯಾತ್ಮಿಕ ಕ್ಷೇತ್ರವಲ್ಲದೆ, ಸಾಮಾಜಿಕ ಕ್ಷೇತ್ರದಲ್ಲಿ ಅಂಧ-ಅನಾಥ ಮಕ್ಕಳ ಪೋಷಣೆ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಹಾಗೂ ವೃತ್ತಿರಂಗಭೂಮಿಯ ಮೂಲಕ ಕಲೆಯ ರಕ್ಷಣೆ, ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ ದಾಸೋಹದಂತಹ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ, ಬಹುಭಾಷಾ ಪಂಡಿತರಾಗಿ, ಗಾಯಕರಾಗಿ, ವಾದಕರಾಗಿ, ನಾಟಕಕಾರರಾಗಿ, ಕವಿಗಳಾಗಿ, ವಚನಕಾರರಾಗಿ ಹೊಸ ರಾಗಗಳ ಅನ್ವೇಶಕರಾಗಿ ಅವರು ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆ ಅವಿಸ್ಮರಣೀಯ.

ಪುಟ್ಟರಾಜ ಗವಾಯಿ ಅವರ ಸಂಗೀತ ಸೇವೆ ಅನುಪಮವಾದದ್ದು , ಅಮೋಘವಾದದ್ದು .ಅವರದ್ದು, ಆಧ್ಯಾತ್ಮ ಸಾಧನೆಯ ಶರಣ ಜೀವನ, ಪರಿಶುದ್ಧ ಆಚಾರ, ನಡೆ- ನುಡಿಗಳೊಂದಿಗೆ ಸದಾ ಕಾಯಕ ನಿರತರಾಗಿ, ಶಿಷ್ಯ ಬಳಗಕ್ಕೆ ವಿದ್ಯೆಯನ್ನು ಧಾರೆ ಎರೆಯುತ್ತಾ, ಸಮಾಜದ ಸರ್ವತೋಮುಖ ಬೆಳವಣಿಗೆಯತ್ತ ಗಮನಹರಿಸುತ್ತ, ಸಾರ್ಥಕ ಬದುಕನ್ನು ಸವೆಯಿಸಿದ ಮಹಾನ್ ಸಂತರು. ಮಾರ್ಚ 3 ಅವರ ಜನ್ಮ ದಿನ. ಈ ಜಯಂತಿಯನ್ನು ನಮ್ಮ ರಾಜ್ಯ ಸರಕಾರ ಸರಕಾರಿ ಜಯಂತಿ ಯಾಗಿ ಆಚರಣೆ ಮಾಡಲು ಅಧಿಕೃತ ಘೋಷಣೆ ಮಾಡಿ ಅವರ ಅಪಾರ ಸೇವೆಯನ್ನು ಗುರುತಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಒತ್ತಾಯ.
ಶರಣು ಪಾಟೀಲ ಮೋತಕಪಲ್ಲಿ, ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ.

ವರದಿ : ರಾಜೇಂದ್ರ ಪ್ರಸಾದ್

error: Content is protected !!