ಕರ್ನಾಟಕ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಕರ್ನಾಟಕದ ಜನತೆಗೆ ಅನುಕೂಲವಾಗುವಂತಹ ಬಜೆಟ್ ಆಗಿದ್ದು, ಸರ್ವಾಂಗಣ ಅಭಿವೃದ್ಧಿ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಔದ್ಯೋಗಿಕ ಎಲ್ಲಾ ವಲಯದಲ್ಲಿ ನ್ಯಾಯ ನೀಡಿದಂತಾಗಿದೆ. ಕರ್ನಾಟಕ ಜನರ ಮನಸ್ಸಿನ ಹಿತವನ್ನು ಕಾಯುವ ಬಜೆಟ್ ಮಂಡಿಸಿದ್ದಾರೆ ಬಜೆಟ್ ಅಭಿವೃದ್ಧಿ ಪರವಾಗಿದೆ ಜನಪ್ರಿಯ ಯೋಜನೆ ಜೊತೆಗೆ ಅಭಿವೃದ್ಧಿ ಪಥ ನಡೆಯುವಂತಹ ಹಣ ಹಂಚಿಕೆ ಮಾಡಿದ್ದು ತುಂಬಾ ಶ್ಲಾಘನೀಯ ಬಜೆಟ್ ಆಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ 5000 ಕೋಟಿ ಅನುದಾನ, ಸಮಾಜ ಕಲ್ಯಾಣ ಇಲಾಖೆಗೆ 42,000 ಕೋಟಿ, 37 ಲಕ್ಷ ರೈತರಿಗೆ ಸಾಲ ನೀಡುವ ಗುರಿ,
5 ಲಕ್ಷ ಮನೆಗಳ ನಿರ್ಮಾಣ, ಕಾರ್ಮಿಕ ಮಕ್ಕಳ ವಸತಿ ಶಾಲೆಗೆ 750 ಕೋಟಿ, ಮಹಿಳೆಯರ ಆರ್ಥಿಕ ಜೀವನ ಸುಧಾರಿಸುವುದು ಅರ್ಚಕರಿಗೆ ರೈಲ್ವೆ ಯೋಜನೆ ಪ್ರವಾಸಿ ತಾಣಗಳ ಅಭಿವೃದ್ಧಿ ಕ್ಯಾಂಟೀನ್ ಸ್ಥಾಪನೆ ಶಾಲಾ ‘ ಮಕ್ಕಳಿಗೆ ಉತ್ತೇಜನ, ರೇಷ್ಮೆ ಅಭಿವೃದ್ಧಿ, ಮೈಸೂರಿನಲ್ಲಿ ಚಿತ್ರನಗರಿ,ಕೋರ್ಟ್ ಗ್ರಂಥಾಲಯಗಳ ಮೇಲ್ದರ್ಜೆ, ಇನ್ನು ಹತ್ತು ಹಲವಾರು ವಲಯಗಳಲ್ಲಿ ಹಣವನ್ನು ಹಂಚಿಕೆ ಮಾಡಿ ಕರ್ನಾಟಕ ಜನರ ಆರ್ಥಿಕ ಬೆಳವಣಿಗೆಯ ಬಜೆಟ್ ಮಂಡಿಸಿದ್ದಾರೆ ಎಂದು ಚಿಂಚೋಳಿ ಪುರಸಭೆ ಅಧ್ಯಕ್ಷ ಆನಂದ್ ಟೈಗರ್ ಹೇಳಿದ್ದಾರೆ.
ವರದಿ : ರಾಜೇಂದ್ರ ಪ್ರಸಾದ್