ರೇಣುಕಾಚಾರ್ಯರು ಮಹಾನ ಸಿದ್ದಿ ಪುರುಷರೆಂದು ಉಲ್ಲೇಖಿಸಲಾಗಿದೆ ಪುರಸಭೆ ಅಧ್ಯಕ್ಷ ಆನಂದ್ ಟೈಗರ್

ಚಿಂಚೋಳಿ : ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪುರಸಭೆ ಅಧ್ಯಕ್ಷ ಆನಂದ ಟೈಗರ್ ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲಿ ಒಬ್ಬರು ಕೈಲಾಸದ ಪ್ರಮುಖರಲ್ಲಿ ಒಬ್ಬರು, 12ನೇ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯರು ಮಹಾನ ಸಿದ್ದಿ ಪುರುಷರೆಂದು ಉಲ್ಲೇಖಿಸಲಾಗಿದೆ, ಅವರು ಲಂಕೆಗೆ ಹೋಗಿ ರಾಮಣ್ಣ ಹಾಗೂ ಅವನ ತಮ್ಮ ವಿಭೀಷಣನ ಇಷ್ಟದಂತೆ ಮೂರು ಕೋಟಿ ಲಿಂಗಗಳನ್ನು ಸ್ಥಾಪಿಸಿದರು ಎಂದು ಚೋಳ ರೇಣುಕಾ ಸಂವಾದ ಗ್ರಂಥ ಸಂಸ್ಕೃತದಲ್ಲಿ ಇದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರುಗಳಾದ ಗೋಪಾಲರಾವ್ ಕಟ್ಟಿಮನಿ, ಮಹೇಶ ಪತ್ತಾರ್, ಪುರಸಭೆ ಸಿಬ್ಬಂದಿಗಳಾದ ದೇವಿಂದ್ರಪ್ಪ ಜೆ. ಇ. ಜಗನ್ನಥ ಕಟ್ಟಿ, ಸೋಮಶೇಖರ, ಇಜಾಜ, ಜಗನ್ನಾಥ ಕಟ್ಟಿ, ಗುಂಡಪ್ಪ ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!