ತಾಯಂದಿರ ತುಲಾಭಾರ ಕಾರ್ಯಕ್ರಮ ಇಂದಿನ ಯುವ ಜನಾಂಗಕ್ಕೆ ಮಾದರಿ:ಪರಮಪೂಜ್ಯ ಶಂಕರ್ ಲಿಂಗ ಶಿವಾಚಾರ್ಯರು

ಔರಾದ್: ಇಂದಿನ ಆಧುನಿಕ ಯುಗದಲ್ಲಿ ಸಂಬಂಧಗಳಲ್ಲಿ ಬಿರುಕು ಮೂಡುವ ಸಂದರ್ಭದಲ್ಲಿ ತಾಯಂದಿರಿಗೆ ಮಕ್ಕಳಿಂದ ತುಲಭಾರ ಹಮ್ಮಿಕೊಂಡ ಕಾರ್ಯಕ್ರಮ ಯುವ ಜನಂಗಕ್ಕೆ ಮಾದರಿ ಎಂದು ಹಣೆಗಾಂವ್ ಪರಮಪೂಜ್ಯ ಶಂಕರಲಿಂಗ ಶಿವಾಚಾರ್ಯರು ಅಭಿಪ್ರಾಯ ಪಟ್ಟರು.

ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಸಹಬಾಳ್ವೆ ಸಂಸ್ಥೆಯಿಂದ ಪಾರ್ವತಿ ಸ್ವ. ಗುರುಪಾದಯ್ಯ ಸ್ವಾಮಿ ಹಾಗೂ ಗಜರಾಬಾಯಿ ಸ್ವ. ತುಕಾರಾಮ ರ‍್ಯಾಕಲೆ ರವರಿಗೆ ಹಮ್ಮಿಕೊಂಡ ತುಲಾಭಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿ, ತಾಯಿ ಭೂಮಿಯಾದರೆ ತಂದೆ ಆಕಾಶ ತಾಯಿ ಸೃಷ್ಟಿ ಕರ್ತೆ ಅವಳ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಅವಳಿಗೆ ವಿವಿಧ ಆಯಮಗಳ ಮುಖಾಂತರ ಗೌರವ ಸಮರ್ಪಣೆ ಮಾಡುವುದು ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ ಇಂತಹ ಕಾರ್ಯಕ್ರಮ ಗ್ರಾಮ ಗ್ರಾಮಗಳಲ್ಲಿ ಜರುಗಿದರೆ ಅಂತಹ ಗ್ರಾಮಗಳು ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯ ಆ ನಿಟ್ಟಿನಲ್ಲಿ ತುಲಾಭಾರ ಕಾರ್ಯಕ್ರಮ ಯುವ ಪೀಳಿಗೆಗೆ ಪ್ರೇರಣೆಯಾಗಿ ಅಕ್ಕಪಕ್ಕದ ಗ್ರಾಮ ತಾಲೂಕುಗಳಲ್ಲಿ ಇಂತಹ ಕಾರ್ಯಕ್ರಮಗಳು ಜರಗಲಿ ಎಂಬುದು ನನ್ನ ಮಹಾದಾಸೆ ಎಂದು ಅಭಿಪ್ರಾಯ ಪಟ್ಟರು.

ಕೌಳಸದ ಪೂಜ್ಯ ಬಸವಲಿಂಗ ಶಿವಾಚಾರ್ಯರು ಮಾತನಾಡಿ, ತಾಯಿಯ ಮನಸ್ಸು ಪರಿಶುದ್ಧ ವಾಗಿದ್ದು ತಾಯಿ ಮಾಡುವ ಪ್ರೀತಿಯ ಮುಂದೆ ಎಲ್ಲವೊ ಶೂನ್ಯ ವಾಗಿದೆ. ನಮ್ಮ ದೇಶದ ನದಿಗಳಿಗೆ ತಾಯಿಯ ಹೆಸರುಗಳನ್ನು ಇಡಲಾಗಿದೆ ಇದು ಸದಾ ಹರಿಯುವ ಮುಲಕ ದೇಶದ ಅನ್ನದಾತರಿಗೆ ಆಸರೆಯಾಗಿದೆ ಎಂದು ಹೇಳಿದರು.

ಕುಟುಂಬ ಪ್ರಬೋಧನಿಯ ಜಿಲ್ಲಾ ಸಂಯೋಜಕರಾದ ವೀರಶೆಟ್ಟೆ ಜೀರಿಗೆ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ತಾಲೂಕ ಅಧ್ಯಕ್ಷ ರಾಜಕುಮಾರ ಹಲಬರ್ಗೆ, ಮುಖಂಡರಾದ ಸಾಗರ್ ಪಾಟೀಲ್, ಅವಿನಾಶ್ ಪಾಟೀಲ್, ಶಿವಶಂಕರ ಮಣಿಗಂಪುರೆ, ಶಿವಲಿಂಗಯ್ಯ ಸ್ವಾಮಿ, ವಿಶ್ವನಾಥ ಸ್ವಾಮಿ ಸೂರ್ಯಕಾಂತ್ ರಾಕಲೆ, ರಾಜಕುಮಾರ್ ದೇಗಲವಾಡೆ, ವಿಜಯಕುಮಾರ ಸ್ವಾಮಿ, ಅಮರ ಸ್ಥಾವರಮಠ, ನಾಗೇಶ ಸ್ವಾಮಿ, ಸಾಗರ ಸ್ವಾಮಿ ಇದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!