ಹುಮ್ನಾಬಾದ್ನ : ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ರಾಮಚಂದ್ರ ವೀರಪ್ಪ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರಾಗಿರುವ ಶ್ವೇತಾ ತಂದೆ ಜಗನ್ನಾಥ್ ಬಿಎ 6 ನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದು ಇವಳು ನೆಹರು ಯುವ ಕೇಂದ್ರ ಮತ್ತು ಎಸ್ ಬಿ ಕಾಮರ್ಸ್ ಕಾಲೇಜಿನ ಸಯುಕ್ತಶ್ರಯದಲ್ಲಿ ವಿಕಸಿತ ಭಾರತ ಯುವ ಸಂಸತ್ತು ಎಂಬ ಚರ್ಚಾಸ್ಪರ್ಧಿಯಲ್ಲಿ ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡಿ 120 ವಿದ್ಯಾರ್ಥಿಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿ ಎರಡನೇ ಸ್ಥಾನವನ್ನು ಪಡೆದುಕೊಂಡು ಯಶಸ್ವಿಯಾಗಿರುತ್ತಾಳೆ, ಜಿಲ್ಲಾಮಟ್ಟದಲ್ಲಿ ಗೆದ್ದು ರಾಜ್ಯಮಟ್ಟದಲ್ಲಿ ಚರ್ಚಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುತ್ತಾಳೆ. ಇದರ ಪ್ರಯುಕ್ತವಾಗಿ ವಿದ್ಯಾರ್ಥಿನಿಯನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು ಪ್ರಾಚಾರ್ಯರು ಸನ್ಮಾನ ಮಾಡಿ ವಿದ್ಯಾರ್ಥಿನಿಯನ್ನು ಅಭಿನಂದಿಸಿರುತ್ತಾರೆ. ರಾಜ್ಯಮಟ್ಟದಲ್ಲಿ ಯಶಸ್ವಿಯಾಗಲು ಪ್ರಾಂಶುಪಾಲರು ಹಾಗೂ ಎಲ್ಲಾ ಉಪನ್ಯಾಸಕ ವರ್ಗದವರು ಶುಭ ಹಾರೈಸಿದ್ದಾರೆ.