ಬಜೆಟ್ ಆನ್ನು ಮಂಡಿಸಿದ
ನಗರಸಭೆ ಆಯುಕ್ತೇ
ಎಂ ಡಿ ಗೀತಾ ರವರು ಮಾತನಾಡಿ 25 26 ನೇ ಸಾಲಿನ ಆಯವ್ಯಯದಲ್ಲಿನ ಗುರಿಯಂತೆ ನಗರದ 31 ವಾರ್ಡಿನ ಎಲ್ಲಾ ನಾಗರೀಕರಿಗೆ ಉತ್ತಮ ಗುಣಮಟ್ಟದ ಸೌಕರ್ಯಗಳನ್ನು ಒದಗಿಸುವುದರ ಮೂಲಕ ನಾಗರೀಕರಿಗೆ ಉತ್ತಮ ಬದುಕಿಗೆ ಸಹಕಾರಿಯಾಗಲು
ನಗರ ಸಭೆಯ ಎಲ್ಲಾ ಜನಪ್ರತಿನಿಧಿಗಳು ಅಧಿಕಾರಿ ಸಿಬ್ಬಂದಿ ವರ್ಗದವರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಜೆಟ್ ನಲ್ಲಿ ಭಾಗವಹಿಸಿದ್ದ ಶಾಸಕ
ಕೆ ಎಚ್ ಪುಟ್ಟಸ್ವಾಮಿಗೌಡ ಮಾತನಾಡಿ ನಗರದ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಲಾಗುವುದು
ನಗರದ ಮತ್ತು ಮಧ್ಯ ಭಾಗದಲ್ಲಿ ಹಾದು ಹೋಗುವ
ಪಿನಾಕಿನಿ ನದಿಯ ಎರಡು ಬದಿಯಲ್ಲಿ ಸುಮಾರು 3 ಕಿಲೋಮೀಟರುಗಳ.
ಸುಸಜ್ಜಿತವಾದ
ವಾಕಿಂಗ್ ಟ್ರ್ಯಾಕ್ ಅನ್ನು ನಿರ್ಮಾಣ ಮಾಡಲಾಗುವುದು
ನಗರದಲ್ಲಿ ಒಂದು ಲಕ್ಷಕ್ಕೂ ಮೀರಿದ ಜನಸಂಖ್ಯೆ ಇದ್ದು ನಗರದ ಜನತೆಯ ನೀರಿನ ಬವಣೆಯನ್ನು ನಾನು ಕಣ್ಣಾರೆ ನೋಡಿದ್ದು.
ತಾಲ್ಲೂಕಿನ ವಾಟದ ಹೊಸಹಳ್ಳಿ ಕೆರೆಯಿಂದ ಸುಮಾರು 65 ಕೋಟಿ ರೂಗಳ ವೆಚ್ಚದಲ್ಲಿ ನಗರಕ್ಕೆ ನೀರು ತರುವ ಯೋಜನೆ ಅನುಮೋದನೆಗೊಂಡಿದ್ದು ಶೀಘ್ರದಲ್ಲೇ ಕೆಲಸ ಪ್ರಾರಂಭ ಮಾಡಲಾಗುವುದು ಎಂದರು.
ಈ ಯೋಜನೆಗೆ ಸ್ಥಳೀಯರ ವಿರೋಧವಿದ್ದು
ಎತ್ತಿನಹೊಳೆ ನೀರು ಕೆರೆಗೆ ಬಂದ ನಂತರ ನಗರಕ್ಕೆ ನೀರನ್ನು ತೆಗೆದುಕೊಂಡು ಹೋಗುತ್ತೇನೆ
ಯಾವುದೇ ಕಾರಣಕ್ಕೂ ಕೆರೆಯ ಅಕ್ಕ ಪಕ್ಕದ ಹಳ್ಳಿಗಳ ಜನತೆಗೆ ಯಾರ ಚಿತಾವಣೆಗೂ ಒಳಗಾಗದೆ ಸಹಕರಿಸಬೇಕು
ಯಾವುದೇ ಕಾರಣಕ್ಕೂ ಈ ಯೋಜನೆಯ ಕೆಲಸ ನಿಲ್ಲುವುದಿಲ್ಲ ನೀರು ಕೊಡುವುದು ಪುಣ್ಯದ ಕೆಲಸ ಚಿತಾವಣೆ ಮಾಡುವ ಲೀಡರ್ ಗಳು ಸಹ ನೀರು ಕೊಡುವ ಈ ಪುಣ್ಯದ ಕೆಲಸಕ್ಕೆ ಸಹಕರಿಸಬೇಕು ಎಂದು ಮಾಧ್ಯಮದವರ ಮುಖಾಂತರ ಮನವಿ ಮಾಡಿದರು.
ವರದಿ : ನರಸಿಂಹ ಗೌಡ ಆರ್