ಚಿಂಚೋಳಿ ತಾಲ್ಲೂಕಿನ ಚಂದನಕೇರಾದ ಭೃಂಗಿ ಪಾಚೇಶ್ವರರ 10ನೇ ಜಾತ್ರೆ ಅಂಗವಾಗಿ ನಡೆದ ಆಲೂರಿನ ಕೆಂಚಬಸವೇಶ್ವರ ಪುರಾಣ ಮಹಾಮಂಗಲ ಕಾರ್ಯಕ್ರಮದಲ್ಲಿ ನಿಡಗುಂದಾದ ಕರುಣೇಶ್ವರ ಶಿವಾಚಾರ್ಯರು ಸಾನಿಧ್ಯದಲ್ಲಿ ಪತ್ರಕರ್ತ ಜಗನ್ನಾಥ ಶೇರಿಕಾರ, ವೈದ್ಯಾಧಿಕಾರಿ ಡಾ. ದೀಪಕ್ ಸಿ. ಪಾಟೀಲ, ಸಾವಯವ ಕೃಷಿಕ ಗುಂಡೇರಾಯ ಪಾಟೀಲ ಧೂಳಗೊಂಡ ಅವರಿಗೆ ಚಂದನ ಸುಗಂಧ ಮತ್ತು ನಿವೃತ್ತ ಎಂಜಿನೀಯರ್ ರಾಜಶೇಖರ ಬಿರಾದಾರ ಅವರಿಗೆ ಭೃಂಗಿಶ್ರೀ ಪ್ರಶಸ್ತಿಯನ್ನು ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಂಗಳವಾರ ಪ್ರದಾನ ಮಾಡಿದರು
ಭೃಂಗಿ ಪಾಚೇಶ್ವರರ 10ನೇ ಜಾತ್ರಾ ಮಹೋತ್ಸವ
ಕೆಂಚ ಬಸವೇಶ್ವರ ಪುರಾಣ ಮಹಾಮಂಗಲ
ಅಭಿನವ ರಾಚೋಟೇಶ್ವರ ಶಿವಾಚಾರ್ಯರ ಧಾರ್ಮಿಕ ಸೇವೆ ಶ್ಲಾಘನೆ
ಚಂದನಕೇರಾ ಜಾತ್ರೆಯಲ್ಲಿ ಪತ್ರಕರ್ತ ಜಗನ್ನಾಥ ಶೇರಿಕಾರ ಸೇರಿ ನಾಲ್ವರಿಗೆ ಪ್ರಶಸ್ತಿ ಪ್ರದಾನ.
ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಸೇವೆಯಿಂದ ಮಠಾಧೀಶರ ಗೌರವ ಹೆಚ್ಚಳ ಕರುಣೇಶ್ವರ ಶಿವಾಚಾರ್ಯರ ಅಭಿಮತ
ಗುರುಗಳಿಗೆ ಮಾದರಿ ಎಂದರೆ ಸಿದ್ಧಗಂಗೆಯ ತ್ರಿವಿಧ ದಾಸೋಹಿ ಶಿವಕುಮಾರ ಮಹಾಸ್ವಾಮೀಜಿಗಳು. ಅವರಿಂದಲೇ ನಾಡಿನಲ್ಲಿ ಮಠಾಧೀಶರ ಗೌರವ ಹೆಚ್ಚಳವಾಗಿದೆ ಎಂದು ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು ತಿಳಿಸಿದರು.
ತಾಲ್ಲೂಕಿನ ಚಂದನಕೇರಾದ ಭೃಂಗಿ ಪಾಚೇಶ್ವರ ಕಟ್ಟಿಮಠದ ರಾಚೋಟೇಶ್ವರ ಶಿವಾಚಾರ್ಯರ ಪುಣ್ಯಸ್ಮರಣೆ ಮತ್ತು ಭೃಂಗಿ ಪಾಚೇಶ್ವರರ 10ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಆಲೂರಿನ ಕೆಂಚ ಬಸವೇಶ್ವರ ಪುರಾಣ ಮಹಾಮಂಗಲದಲ್ಲಿ ಮಂಗಳವಾರ ಸಾನಿಧ್ಯ ವಹಿಸಿ ಮಾತನಾಡಿದರು.
ಗುರುವಾದವರು ಭಕ್ತರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆ ಎಂದು ಭಾವಿಸುತ್ತಾರೆ. ಗುರುವಿಗಿಂತ ಶ್ರೇಷ್ಠ ಬೇರೊಂದಿಲ್ಲ. ಇಂತಹ ಗುರುವಿಗೆ ಭಕ್ತರೇ ನಿಜವಾದ ತಂದೆತಾಯಿ ಎಂದು ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರ ಬಣ್ಣಿಸಿದರು.
ಸಮಾಜದಲ್ಲಿ ಜೀವನ ಮೌಲ್ಯಗಳು ಕಾಣೆಯಾಗುತ್ತಿರುವುದಕ್ಕೆ ದುರಾಸೆಯೇ ಕಾರಣವಾಗಿದೆ. ನಮ್ಮ ಜೀವನ ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಬೇಕಾದರೆ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಕಾರ್ಯಕ್ರಮದ ನೇತೃತ್ವವಹಿಸಿದ್ದ ಶ್ರೀಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಪತ್ರಕರ್ತ ಜಗನ್ನಾಥ ಡಿ ಶೇರಿಕಾರ, ಕಲಬುರಗಿಯ ಇಎಸ್‌ಐಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೀಪಕ ಸಿ.ಪಾಟೀಲ, ಪಟ್ಟಣ ಗ್ರಾಮದ ಗುಂಡೇರಾಯ ಪಾಟೀಲ ಧೂಳಗೊಂಡ ಅವರಿಗೆ “ಚಂದನ ಸುಗಂಧ ಪ್ರಶಸ್ತಿ” ಹಾಗೂ ನಿವೃತ್ತ ಎಂಜಿನಿಯರ್ ರಾಜಶೇಖರ ಬಿರಾದಾರ ಅವರಿಗೆ “ಭೃಂಗಿಶ್ರೀ ಪ್ರಶಸ್ತಿ” ಪ್ರದಾನ ಮಾಡಿದರು.
ದೇವಸೂಗೂರಿನ ವೀರಭದ್ರಯ್ಯ ತಾತ ಹಾಗೂ ಮಹಿಳಾ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷೆ ಉಮಾ ಪಾಟೀಲ, ವೀರಶೈವ ಲಿಂಗಾಯ ಮಹಾಸಭೆ ತಾಲ್ಲೂಕು ಅಧ್ಯಕ್ಷ ಶರಣು ಪಾಟೀಲ, ಗುಲ್ಬರ್ಗ ವಿವಿಯ ಆಂಗ್ಲ ಭಾಷಾ ಪ್ರಾಧ್ಯಾಪಕ ಚಿಂತನ ರಾಠೋಡ್ ಮತ್ತು ನಾಲ್ವರು ಪ್ರಶಸ್ತಿ ಪುರಸ್ಕೃತರು ಮಾತನಾಡಿದರು.ಜೋಳ ರಾಶಿಯ ರಾಗೋಲು ಹರಾಜಿನಲ್ಲಿ ಕೃಷಿಕರಾದ ಹಣಮಂತರಾವ್ ಪಾಟೀಲ ಸಿನಿಗೊಂಡ ರೂ 16,500ಕ್ಕೆ ಮತ್ತು ಕೆಂಚಬಸವೇಶ್ವರರ ತೊಟ್ಟಿಲು ರೂ.9991ಕ್ಕೆ ನಾಗಣ್ಣ ಪೂಜಾರಿ ಪಡೆದುಕೊಂಡರು.
ವಚನ ಕಂಠಪಾಠ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು. ಶಿಕ್ಷಕರಾದ ಮೀನಾಕ್ಷಿ ರೇವಣಸಿದ್ದಪ್ಪ ಮೋಘಾ ದಂಪತಿ ನಿರ್ಣಾಯಕರಾಗಿದ್ದರು.
ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ವೀರಭದ್ರಪ್ಪ ಸಿರಂಜಿ, ದತ್ತಾತ್ರೆಯ ರಾಯಗೋಳ, ಸಿದ್ದಣ್ಣ ವಟವಟಿ, ಶರಣಗೌಡ ಪಾಟೀಲ, ಅಮೃತರಾವ ರಾಮಗೊಂಡ, ಉಮೇಶ ಹಣಮಗೊಂಡ, ಸಿದ್ದಣ್ಣ ಸಿನಗೊಂಡ, ಭವಾನಿ ಫತೆಪುರ, ಸಚ್ಚಿದಾನಂದ ಸುಂಕದ್, ಶ್ರೀನಿವಾಸ ಚಿಂಚೋಳಿಕರ್, ಸಂಜೀವಕುಮಾರ ಪಾಟೀಲ ಯಂಪಳ್ಳಿ, ಕೇಶವ ಕುಲಕರ್ಣಿ, ಶಿವಪ್ರಸಾದ ಪಿಜಿ, ವಿರೂಪಾಕ್ಷಯ್ಯ ಮಠಪತಿ, ಜಗದೀಶ ಪಾಟೀಲ, ಡಾ. ಗುರುಪ್ರಸಾದ ಮರಗುತ್ತಿ, ಬಸವರಾಜ ಪಾಟೀಲ, ಮಹಾನಂದಪ್ರಭು, ಕಲ್ಲಯ್ಯಸ್ವಾಮಿ, ಸಂಪತಕುಮಾರ ಮುಸ್ತಾರಿ, ಮಲ್ಲಿನಾಥ ಮೇಲಗಿರಿ, ಮಂಜುನಾಥ ಸುನಾಗಮಠ, ಗಣೇಶ ಹೂಗಾರ, ಸಂತೋಷ ಪಾಟೀಲ ಮೊದಲಾದವರು ಇದ್ದರು.
ಪುರಾಣಿಕರಾದ ಶಿವರುದ್ರಯ್ಯ ಮಠಪತಿ ಸ್ವಾಗತಿಸಿದರು. ಹಣಮಂತ ಪಾಣಿ ನಿರೂಪಿಸಿದರು.
ವರದಿ : ರಾಜೇಂದ್ರ ಪ್ರಸಾದ್