ರಾಯಚೂರಿನಲ್ಲಿ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿಕೆ
ರಾಯಚೂರಿನ ಪಶ್ಚಿಮ ಠಾಣೆ ಪಿಎಸ್‌ಐ, ಸಿಪಿಐ ಹಾಗೂ ಮಹಿಳಾ ಠಾಣೆ ಸಿಬ್ಬಂದಿ ವಿರುದ್ದ ಪ್ರಕರಣ ದಾಖಲು
ಪೊಲೀಸರ ವಿರುದ್ದ ಜಾತಿ ನಿಂದನೆ, ಕೊಲೆ ಪ್ರಕರಣ ದಾಖಲು
ಪಶ್ಚಿಮ ಠಾಣೆ ಪಿಎಸ್‍ಐ ಮಂಜುನಾಥ, ಸಿಪಿಐ ನಾಗರಾಜ್ ಮೇಕಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲು
ನಗರದ ಈಶ್ವರ ನಗರದ ವಿರೇಶ್ (27) ಸಾವನ್ನಪ್ಪಿರುವ ಯುವಕ
ರಾಯಚೂರು ಉಪ ವಿಭಾಗದ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ
*ನಾಳೆ ಸಿಐಡಿ ತಂಡ ರಾಯಚೂರಿಗೆ ಬರಲಿದ್ದು ,ತನಿಖೆಯನ್ನ ಸಿಐಡಿಗೆ ವಹಿಸಲಾಗುವುದು*
*ಪ್ರಕರಣ ಹಿನ್ನೆಲೆ ಪಶ್ಚಿಮ ಠಾಣೆ ಪಿಎಸ್‍ಐ ಮಂಜುನಾಥ, ಸಿಪಿಐ ನಾಗರಾಜ್ ಮೇಕಾ ಅಮಾನತ್ತು*
ಮುಂದಿನ ಪ್ರಕ್ರಿಯೆಯನ್ನು ಸಿಐಡಿ ಅಧಿಕಾರಿಗಳು ನಡೆಸುತ್ತಾರೆ
ಪೊಲೀಸರ ಮೇಲೆ ಆರೋಪ ಇರುವುದರಿಂದ ಸಿಐಡಿ ತನಿಖೆಗೆ ವಹಿಸಲಾಗುತ್ತಿದೆ
ಸಿಐಡಿ ವರದಿ ಆಧಾರದ ಮೇಲೆ ಮುಂದೆ ಕ್ರಮ ಜರುಗಿಸಲಾಗುತ್ತದೆ
ರಾಯಚೂರಿನಲ್ಲಿ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್ ಹೇಳಿಕೆ
ಯುವಕನ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ನಿನ್ನೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಪ್ರತಿಭಟನೆ ಮಾಡಿದ್ದರು.
ವರದಿ : ಗಾರಲ ದಿನ್ನಿ ವೀರನ ಗೌಡ