ಚಿಂಚೋಳಿ ಹಾಗೂ ಚಂದಾಪುರ ಅವಳಿ ಪಟ್ಟಣಗಳಲ್ಲಿ ಏಪ್ರಿಲ್ 14 ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಅಂಗವಾಗಿ ಪುರಸಭೆ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಗಳನ್ನು ತಾಲೂಕು ದಂಡಾಧಿಕಾರಿಗಳಾದ ಸುಬ್ಬಣ್ಣ ಜಮಖಂಡಿ ಹಾಗೂ ಪುರಸಭೆ ಅಧ್ಯಕ್ಷ ಆನಂದ ಟೈಗರ ಅವರ ನೇತೃತ್ವದಲ್ಲಿ ರಿಬ್ಬನ್ ಕಟ್ ಮಾಡುವ ಮುಖಾಂತರ ಉದ್ಘಾಟನೆಯನ್ನು ಮಾಡಲಾಯಿತು. ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವಿ ಲಕ್ಷ್ಮಯ್ಯ, ಸಿಪಿಐ ಕಪಿಲ್ ದೇವ, ತಾಲೂಕು ಆರೋಗ್ಯ ಅಧಿಕಾರಿ ಡಾ. ಗಫಾರ, ತಾಲೂಕು ಸರ್ಕಾರಿ ನೌಕರ ಸಂಘ ಅಧ್ಯಕ್ಷ ದೇವೇಂದ್ರಪ್ಪ ಹೋಳ್ಕರ್, ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಮೂರ್, ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳಾದ ಕಾಶಿನಾಥದಲ್ಲಿ ಪುರಸಭೆ ಸದಸ್ಯರುಗಳಾದ ಅಬ್ದುಲ ಬಾಸಿದ, ರೂಪಕಲ ಕಟ್ಟಿಮನಿ, ನಾಗೇಂದ್ರಪ್ಪ ಗುರಂಪಳ್ಳಿ, ಶಶಿಕಲಾಸ್ಕರ್, ಬಸವರಾಜ ಸಿರಸಿ, ಶ್ರೀಕಾಂತ್ ಹಾಗೂ ಮುಖಂಡರುಗಳಾದ ಸಂತೋಷ ಗುತ್ತೇದಾರ, ಗೋಪಾಲ ರಾವ ಕಟ್ಟಿಮನಿ, ಜಗನ್ನಾಥ ಕಟ್ಟಿ, ಅಮರ ಲೋಡನೂರ್, ಮಾರುತಿ
ಗಂಜಿಗಿರಿ,ವಾಮನ ರಾವ ಕೊರವಿ, ವಿಶ್ವನಾಥ್ ಹೊಡೆ ಬೀರನಳ್ಳಿ, ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್