ಆರ್.ಕೆ ಸ್ಪೋರ್ಟ್ಸ ಕ್ಲಬ್ ಸಂಸ್ಥಾಪಕರು ಹಾಗೂ ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಹುಬ್ಬಳ್ಳಿ ಧಾರವಾಡ ಶಹರ ಅಧ್ಯಕ್ಷರಾದ ಶ್ರೀ ರಮೇಶ ಕಾಂಬ್ಳೆ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ ಟೀಚರ್ಸ್ ಕಾಲೋನಿ ಅಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ!! ಬಿ ಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು ..
ನಂತರ ಸಾವಿರಾರು ಅಭಿಮಾನಿಗಳ ಮುಖಾಂತರ ಉಣಕಲ್ ಇಂದ ವಿದ್ಯಾನಗರ, ಹೊಸೂರು ಮತ್ತು ಚನ್ನಮ್ಮ ಸರ್ಕಲ್ ಮಾರ್ಗವಾಗಿ ಬಾಬಾಸಾಹೇಬರ ಭಾವಚಿತ್ರ ಮೆರವಣಿಗೆ ಹಾಗೂ ಬೈಕ್ ಜಾಥಾ ಮುಖಾಂತರ ನಗರದ ರೈಲ್ವೆ ನಿಲ್ದಾಣದ ಹತ್ತಿರ ಇರುವ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಭೀಮ ನಮನಗಳನ್ನು ಸಲ್ಲಿಸಿ, ಸಿದ್ಧಾರ್ಥ ಕಾಲೋನಿ ಅಲ್ಲಿ ಸಮತಾ ಸೈನಿಕ ದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿಳಾರ ಅವರ ನೇತೃತ್ವದಲ್ಲಿ ಜರುಗಿದ ಜಯಂತಿ ಕಾರ್ಯಕ್ರಮ ಪಾಲ್ಗೊಳ್ಳಲಾಯಿತು..
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡರಾದ ಮಾರುತಿ ದೊಡ್ಡಮನಿ, ರವಿ ಕಲ್ಯಾಣಿ, ಗುರುನಾಥ ಚಲವಾದಿ, ಮಲ್ಲಿಕಾರ್ಜುನ ಯಾತಗೇರಿ, ಉಡಚಪ್ಪ ಕಾಕಣ್ಣವರ, ಶಂಕರ ಪಾತರದ, ಸಂತೋಷ ದೊಡ್ಡಮನಿ, ಮಂಜು ಹೊಸಮನಿ, ಕಿರಣ ಪವಾರ, ಬಸವರಾಜ ದಾಸರ, ಮಾರುತಿ ಜವಳಿ ಹಾಗೂ ಸಾವಿರಾರು ಅನುಯಾಯಿಗಳು ಪಾಲ್ಗೊಂಡಿದ್ದರು..