ಕಲಬುರ್ಗಿ ಜಿಲ್ಲಾ ಮಟ್ಟದ ಬಸವ ಜಯಂತಿ ಪೂರ್ವಭಾವಿ ಸಭೆ: ಶರಣು ಪಾಟೀಲ

ಕಲಬುರಗಿ ಜಿಲ್ಲಾ ಮಟ್ಟದ ವಿಶ್ವಗುರು ಬಸವಣ್ಣನವರ 892ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸಮಾಜದ ಹಿರಿಯರು ಶಾಸಕರಾದ ಎಂ ವೈ ಪಾಟೀಲ್ ಅವರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದು ನಮಗೆಲ್ಲ ಹರ್ಷ ತಂದಿದೆ. ಇದೆ ಏಪ್ರಿಲ್ 29 ರಂದು ಸಾಯಂಕಾಲ ಕಲಬುರ್ಗಿಯ ಶರಣಬಸವೇಶ್ವರ ತೇರ ಮೈದಾನದಲ್ಲಿ ಲಕ್ಷಾಂತರ ಸಮಾಜದ ಜನರನ್ನು ಸೇರಿಸಿ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಅದರ ಪ್ರಯುಕ್ತ ಸ್ವಾಗತ ಸಮಿತಿ ಅಧ್ಯಕ್ಷರಾದ ಎಂ ವೈ ಪಾಟೀಲರು, ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷರಾದ ಶರಣು ಮೋದಿ ಮಾಜಿ ಶಾಸಕರಾದ ದ್ದೊಡ್ಡಪ್ಪ ಗೌಡ ಪಾಟೀಲ ನರಿಬೋಳ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ ಪಾಟೀಲ ಹಾಗೂ ಕಲಬುರ್ಗಿ ಜಿಲ್ಲೆಯ ನಮ್ಮ ಸಮಾಜದ ಹಲವಾರು ಪ್ರಮುಖ ಮುಖಂಡರು ಚಿಂಚೋಳಿ ತಾಲೂಕಿನ ಜನರನ್ನು ಆಹ್ವಾನಿಸಲು ಇದೆ 17 ರಂದು ಬೆಳಿಗ್ಗೆ 10 ಗಂಟೆಗೆ ಹಾರಕೂಡ ಕಲ್ಯಾಣ ಮಂಟಪ ಚಿಂಚೋಳಿಗೆ ಆಗಮಿಸುತ್ತಿದ್ದು. ಚಿಂಚೋಳಿ ತಾಲೂಕಿನ ಸಮಾಜ ಬಾಂಧವರು ಎಲ್ಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ವಿನಂತಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!