ಬೆಳಗಾವಿ : ಕಾಶ್ಮೀರ ಅನಂತನಾಗ ಜಿಲ್ಲೆಯ ಪಹಲ್ಗಾಮದಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿ ಅತ್ಯಂತ ಹೇಯ ಕೃತ್ಯ. ಹಿಂದೂ ಎಂಬುದನ್ನು ಖಚಿತಪಡಿಸಿಕೊಂಡು ಗುಂಡಿನ ಮಳೆಗರೆದು ಹತ್ಯೆ ಮಾಡಿರುವುದು ಕಟು ಶಬ್ದಗಳಲ್ಲಿ ಖಂಡಿಸಬೇಕಾಗಿದೆ ಹಿಂದೂಗಳನ್ನೇ ಗುರಿಯನ್ನಾಗಿಸಿರುವ ಜಿಹಾದಿ ರಾಕ್ಷಸರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರು ಅತ್ಯಂತ ಕಠಿಣ ಹಾಗೂ ತ್ವರಿತ ಕ್ರಮ ಕೈಗೊಂಡು ಪ್ರತ್ಯುತ್ತರ ನೀಡಬೇಕು 3 ಜನ ಕರ್ನಾಟಕದವರು ಸೇರಿದಂತೆ 26 ಜನರನ್ನು ನಿರ್ದಯಿವಾಗಿ ಕೊಂದು ಹಾಕಿರುವ ಭಯೋತ್ಪಾದಕರ ರುಂಡ ಚೆಂಡಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಬೇಕು. ಅಲ್ಲದೇ, ಶಾಂತಿ ನೆಲೆಸಿರುವ ಜಮ್ಮು ಕಾಶ್ಮೀರದಲ್ಲಿ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಂಡು, ಭಾರತದ ಮೇಲೆ ಕೃತ್ಯ ಎಸಗುವ ಮುನ್ನ ಉಗ್ರರು ನೂರು ಬಾರಿ ಯೋಚಿಸುವಂತೆ ಮಾಡಬೇಕು ಎಂದು ಘಟನೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಸದಾನಂದ ಎಚ್