ಸಂಚು ರೂಪಿಸಿ ದಾಳಿಮಾಡಿದವರನ್ನು ಸರಕಾರ ಹೆಡೆಮುರಿ ಕಟ್ಟಬೇಕು: ಶರಣು ಪಾಟೀಲ ಮೋತಕಪಳ್ಳಿ

ಪಹಲ್ಗಾಮ್ ಗೆ ಭೇಟಿ ನೀಡಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ಮಾಡಿದ ದಾಳಿ ಖಂಡನೀಯ, ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿ 26 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ, 2019ರ ನಡೆದ ಪುಲ್ವಾಮಾ ದಾಳಿಯ ನಂತರ ಅತಿ ದೊಡ್ಡ ಭಯೋತ್ಪಾದಕ ದಾಳಿ ಇದಾಗಿದೆ. ಹೃದಯ ಕಲಕುವ ಈ ಘಟನೆ ಇಡೀ ದೇಶವನ್ನೇ ಸ್ಟಬ್ಧಗೊಳಿಸಿದೆ. ಇಂತಹ ಸಂದರ್ಭದಲ್ಲಿ ಇಡೀ ಭಾರತೀಯರು ಸರ್ಕಾರ ಮತ್ತು ನೊಂದ ಕುಟುಂಬದವರ ಜೊತೆ ನಿಲ್ಲಬೇಕು.
ಜಾತಿ, ಧರ್ಮದ ಹೆಸರಿನ ಮೇಲೆ ಅಮಾನವೀಯವಾಗಿ ಕೊಲ್ಲುವ ಇಂತಹ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಕೃತ್ಯಗಳಿಗೆ ಕ್ಷಮೆ ಎಂಬುದೇ ಇಲ್ಲ. ದಿಟ್ಟ ಕ್ರಮದ ಮೂಲಕ ಪ್ರತ್ಯುತ್ತರ ನೀಡುವ ಕೆಲಸ ನಮ್ಮ ಭಾರತೀಯ ಸೈನ್ಯ ಮಾಡಲಿದೆ. ಭಯೋತ್ಪಾದನೆಯಿಂದ ನಮ್ಮ ದೇಶದ ಶಕ್ತಿ ಯಾರಿಂದಲೂ ಕುಗ್ಗಿಸಲು ಸಾಧ್ಯವಿಲ್ಲ, ಕೃತ್ಯದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ, ಅವರ ಆಗಲಿಕೆಯನ್ನು ಸಹಿಸುವ ಶಕ್ತಿ ಅವರ ಕುಟುಂಬದವರಿಗೆ ಕೊಡಲಿ. ದೇಶಕ್ಕೆ ಮಾರಕವಾದ ಉಗ್ರವಾದಕ್ಕೆ ಸರಕಾರ ತಕ್ಕ ಶಾಸ್ತಿ ಮಾಡಲಿ.
ಶರಣು ಪಾಟೀಲ ಮೋತಕಪಲ್ಲಿ, ವಕ್ತಾರರು ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ.

ವರದಿ : ರಾಜೇಂದ್ರ ಪ್ರಸಾದ್

error: Content is protected !!