ಅಥಣಿ ತಾಲೂಕಿನ ಅಂಜುಮನ್ ಏ ಇಸ್ಲಾಂ ಕಮ್ಮಿಟಿ ಹಾಗೂ ಜಮೀಯತೆ ಉಲಮಾ ಏ ಹಿಂದ್ ನೇತೃತ್ವದಲ್ಲಿ ಪುಣ್ಯ ಪ್ರವಾದಿ ವಿಚಾರದಲ್ಲಿ ರಾಮಗಿರಿ ಮಹಾರಾಜ ಎಂಬವನ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಮುಸ್ಲಿಂ ಸಮುದಾಯದಿಂದ ಅಂಗಡಿ ಮುಂಗಟ್ಟು ಗಳನ್ನ ಸ್ವಯಂ ಪ್ರೇರಿತ ಬಂದ್ ಮಾಡಿ ಕೈಗೆ ಕಪ್ಪು ಬಟ್ಟೆ ಕಟ್ಟಿ ಶಾಂತ ರೀತಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪಟ್ಟಣದ ಅಬೂಲ ಕಲಾಂ ಶಾಲೆಯಿಂದ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಯಾರ್ಲಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ತಹಶೀಲ್ದಾರ್ ಮೂಲಕ ರಾಷ್ಟ್ರಪತಿ, ಗೃಹ ಮಂತ್ರಿ ಯವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರು,
ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.ರಾಮಗಿರಿ ಮಹಾರಾಜ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಮುಫ್ತಿ ಮೌಲಾನಾ ಹಬೀಬುಲ್ಲಾ ಕಾಶ್ಮಿ, ಮಾಜಿ ಶಾಸಕ ಶಹಾಜಹಾನ್ ಡೋಂಗರಗಾಂವ್, ಮುಖಂಡ ಯೂನುಸ್ ಮುಲ್ಲಾ ಮಾತನಾಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ಸಂಸ್ಥೆಯ ಅಧ್ಯಕ್ಷ ಸೈಯ್ಯದ ಮೀನ್ ಗದ್ಯಾಳ, ಜುಬೇರ್ ನಾಲಬಂದ, ಸೈಯದ್ ಗಡ್ಡೇಕರ. . ಆಬೀದ್ ಮಾಸ್ಟರ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಭರತೇಶ ನಿಡೋಣಿ ಜೆಕೆ ನ್ಯೂಸ್ ಕನ್ನಡ ಅಥಣಿ