ಬಿಜಾಪುರ ನಗರ ಶಾಸಕ ಬಸನಗೌಡ ಯತ್ನಾಳ್ ಅವರು ಇತ್ತೀಚೆಗೆ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಮೈನಾರಿಟಿ ಮುಸ್ಲಿಮ್ಸ್ ಡೆವಲಪ್ಮೆಂಟ್ ಕಮಿಟಿ (ಎಂಎಂಡಿಸಿ) ತೀವ್ರವಾಗಿ ಖಂಡಿಸಿದೆ. ಈ ಸಂವಿಧಾನ ವಿರೋಧಿ ಮತ್ತು ಧಾರ್ಮಿಕ ಅವಮಾನಕರ ಹೇಳಿಕೆಗಾಗಿ ಅವರನ್ನು ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಎಂಎಂಡಿಸಿ ಆಗ್ರಹಿಸಿದೆ.
ಈ ಕುರಿತು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಯತ್ನಾಳ್ ಅವರ ಹೇಳಿಕೆಯು ಇಸ್ಲಾಂ ಧರ್ಮದ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ ಮತ್ತು ಸಮಾಜದಲ್ಲಿ ದ್ವೇಷವನ್ನು ಹರಡುವ ದುರುದ್ದೇಶ ಹೊಂದಿದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಾಸೀಂ ಪೀರ ದರ್ಗಾದ ಸೈಯದ್ ಜೈನುಲ್ ಹಾಬಿದೀನ್, ಎಂ.ಎಂ.ಡಿ.ಸಿ ಮುಖಂಡರಾದ ಶಜ್ಜಾದೆಪಿರಾಂ ಮುಶ್ರೀಫ್, ಇರಫಾನ ಶೇಖ, ಹಾಫೀಜ್ ಸಿದ್ದಿಕಿ, ಇಮ್ರಾನ್ ಜಹಾಗೀರದಾರ, ಹಿದಾಯತ್ ಮಾಶಾಳಕರ್, ಚಾಂದ್ ಹುಸೇನ್ ಮುಲ್ಲಾ, ಅಬ್ದುಲ್ ಹಮೀದ್ ಸಾರವಾಡ, ಖ್ವಾಜಾಅಮಿನ ಮಮದಾಪೂರ, ಹನ್ನಾನ ಶೇಖ, ಇಸಾಕ್ ಲಕ್ಕುಂಡಿ, ಸಾದಿಕ್ ಇಮಾರತವಾಲೆ, ರಫೀಕ್ ಫನಿಬಂದ, ಮುಸಾ ಲಕ್ಕುಂಡಿ, ಸದ್ದಾಂ ಲಕ್ಕುಂಡಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಅಜೀಜ ಪಠಾಣ