ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಎಲಿಮುನ್ನೋಳಿ (ತುರಮಂದಿ) ಗ್ರಾಮದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ, ಡಾ. ಬಿ.ಆರ್. ಅಂಬೇಡ್ಕರ್ ಪರಿವರ್ತನಾ ಸಮಾಜ ಸೇವಾ ಸಂಘ, ಎಲಿಮುನ್ನೋಳಿ ಶಾಖೆಯ ಫಲಕವನ್ನು ಅನಾವರಣಗೊಳಿಸಲಾಯಿತು. ನಂತರ, ಗ್ರಾಮದ ಶತಾಯುಷಿ ಅಜ್ಜಿಗೆ ಹಾಗೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಹುಣಸಿಕೊಳ್ಳಮಠದ ಶ್ರೀ ಸಿದ್ಧಬಸವ ದೇವರು, ಹುಕ್ಕೇರಿ ತಹಶೀಲ್ದಾರ ಶ್ರೀಮತಿ ಮಂಜುಳಾ ನಾಯಕ, ಶ್ರೀಮತಿ ಗ್ರಾ. ಪಂ. ಅಧ್ಯಕ್ಷ ಶ್ರೀ ಮೀರಾಸಾಬ ಮುಲ್ತಾನಿ, ಶ್ರೀ ಪವನ ಕತ್ತಿ, ಶ್ರೀ ಸುರೇಶ ತಳವಾರ ಅವರು ಸೇರಿ ಗ್ರಾಮದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಚ್