ಕಲ್ಬುರ್ಗಿ ಜಿಲ್ಲೆಯ ಕೋಟ್ನೂರ ರಸ್ತೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಕರ್ನಾಟಕ ನವಕರಿಸಬಹುದಾದ ಇಂಧನ ಕೃಷಿ ಪಂಪ್ ಸೇಟ್‌ಗಳ ಬಗ್ಗೆ ಮತ್ತು ಜಲ ಸಂರಕ್ಷಣೆ ಕುರಿತು ಕಾರ್ಯಗಾರ ಕಾರ್ಯಕ್ರಮ ಮಾಡಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ಸಹಾಯಕ ನಿರ್ದೇಶಕ ಅನೀಲ ರಾಠೋಡ ಸತ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ಸಮಸ್ಯೆ ಇದ್ದು ರೈತರು ತುಂಬಾ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಈ ಪರಿಸ್ಥಿತಿಯಲ್ಲಿ ಸೋಲಾರ್ ಅಳವಡಿಕೆ ಅವಶ್ಯಕತೆ ರೈತರಿಗೆ ಇದೆ ಸರ್ಕಾರ ಸಾಕಷ್ಟು ಅನುದಾನ ರೈತರಿಗೆ ನೀಡುತ್ತಿದ್ದು ಅದರ ಸದುಪಯೋಗ ತೆಗೆದುಕೊಂಡು ಅವುಗಳ ನಿರ್ವಹಣೆ ಬಗ್ಗೆ ಹೆಚ್ಚು ಗಮನ ಹರಿಸಿ ಬೇಕು. ಒಟ್ಟಾರೆಯಾಗಿ ಪರಿಸರವನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಮಲ್ಲಿಕಾರ್ಜುನ ರೆಡ್ಡಿ ಕೃಷಿ ಕಾಲೇಜು ಪ್ರಾಧ್ಯಾಪಕರು ಮಾತನಾಡಿ ನೀರಿನ ಸಂರಕ್ಷಣೆ ಕೃಷಿ ಉಪಕರಣಗಳ ನಿರ್ವಹಣೆ ಕುರಿತು ಹೇಳಿದರು
ಶರಣಬಸಪ್ಪ ಪಾಟೀಲ ಸುಲ್ತಾನಪುರ ಪ್ರಗತಿಪರ ರೈತರು ಮಾತನಾಡಿ ಅವರು ತಮ್ಮ ಕ್ಷೇತ್ರಗಳಲ್ಲಿ ಸೋಲಾರ್ ಬಗ್ಗೆ ಸಾಧಕ ಹಾಗೂ ಬಾಧಕಗಳ ಬಗ್ಗೆ ವಿವರಿಸಿ ಬೆಳೆಗಳು, ಸಾವಯವ ಕೃಷಿ, ಸೋಲಾರ ಬಗ್ಗೆ ಮಾಹಿತಿ ನೀಡಿದರು.
ರಮೇಶ ಬೀರಗಿ ಬಿಜಾಪೂರ ಕೃಷಿ ಕಾಲೇಜ ಪ್ರಾಧ್ಯಪಕರು ಮಾತನಾಡಿ ಪಂಪ್ ಸೇಟ್ ಗಳ ಸ್ಟಾರ್ ಲೇಬಲ್ ಗಳ ಹಾಗೂ ಕುಸುಮ ಯೋಜನೆ ಬಗ್ಗೆ ಲಾಭದ ಬಗ್ಗೆ ಹೇಳಿದರು.
ಈ ಸಂಧರ್ಭದಲ್ಲಿ ಉಪ ನಿರ್ದೆಶಕ ಡಾ.ಸೋಮಶೇಖರ ಬಿರಾದಾರ, ಕೃಷಿ ಅಧಿಕಾರಿ ನೀಲಕ್ಕ, ಯಾಸೀನ, ಸುಜಾತಾ, ಬಸವರಾಜ ಸಜ್ಜನ, ಆರ್, ಗಣಪತರಾವ ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್
