ಕೀರ್ತಿ ಮಹಿಳಾ ಅಬಿವೃದ್ಧಿ ಸಂಘದ ವತಿಯಿಂದ ಜ್ಯೋತಿಬಾ ಫುಲೆ ಸ್ವತಂತ್ರ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜ್ ನಿಟ್ಟೂರ್ (ಬಿ) ನಲ್ಲಿ ಸಸಿ ನೆಡುವ ಕಾರ್ಯಕ್ರಮ.
ಬೀದರ್ ಜ್ಯೋತಿಬಾ ಫುಲೆ ಸ್ವತಂತ್ರ ಪದವಿ ಪೂರ್ವ ಕಲ ಮತ್ತು ವಾಣಿಜ್ಯ ಕಾಲೇಜ್ ನಿಟ್ಟೂರು (ಬೀ) ನಲ್ಲಿ ಸಸಿ ನೆಡುವ ಕಾರ್ಯಕ್ರಮ ಜರಗಿತು ಈ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾದ ವಿವಿಧ ಸ್ವಸಹಾಯ ಸಂಘದ ಸದಸ್ಯರ ನೇತೃತ್ವದಲ್ಲಿ, ಗ್ರಾಮದ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಸಸಿ ನೆಟ್ಟಿದ್ದರು. ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಗಲಾ.ಬಿ ಮಾಳಗೆ ರವರು ಮಾತನಾಡಿ ಇಂದು ಪರಿಸರದಿಂದ ನಮಗೆ ಒಳ್ಳೆ ಆರೋಗ್ಯ ಹಾಗೂ ಮತ್ತು ಆಯುಷು ದೋರುಕುತ್ತಿದೆ. ಒಬ್ಬರು ಒಂದು ಗಿಡ ನೆಡುವ ಮುಖಾಂತರ ಅವರ ಆಯುಷ್ ಹೆಚ್ಚಿಸೋಣ ಮತ್ತು ಪರಿಸರ ಮಾಲಿನ್ಯ ಹಾಳಾಗದೆ ನಮ್ಮ ಸುತ್ತ ಮುತ್ತಲಿನ ಅಂಗಳದಲ್ಲಿ ಸಸಿ ನೆಟ್ಟು ಗಿಡ ಮರಗಳಿಂದ ಒಳ್ಳೆ ಸ್ವಾಸ ಉಸಿರು ಪಡೆಯೋಣ, ಈಗಾಗಲೇ ಈಶ್ವರ್ ಬೀ ಖಂಡ್ರೆ ಪರಿಸರ ಅರಣ್ಯ ಜೈವಿಕ ಸಚಿವರು ಹಾಗೂ ಜಿಲ್ಲಾ ಉಸ್ತವರಿಗಳು ಕರ್ನಾಟಕ ಸರ್ಕಾರ, ಅವರು ದಿನ ರಾತ್ರಿ ಹಗಲು ಎನ್ನದೆ ಪರಿಸರ ನೆಡುವ ಹಾಗೂ ಕಾಪಾಡುವ ಕಾರ್ಯಕ್ರಮಗಳು ನಿರಂತರ ಮಾಡುತ್ತಿದ್ದಾರೆ ಈ ಮುಖಾಂತರ ರಾಜ್ಯದಲ್ಲಿ ಹಸಿರು ಕರ್ನಾಟಕ ಉಸಿರು ಕರ್ನಾಟಕ ಮಾಡುವದರ ಜೊತೆಗೆ ಕೆಲಸ ಕಾರ್ಯದಲ್ಲಿ ತೊಡಗಿದ ಅವರು ಅರಣ್ಯ ಪರಿಸರ ಹಾಳಾಗದ ಹಾಗೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿ ತಿಳಿಸಿದರು, ಇದೆ ವೇಳೆ ಎಂ.ಜೇ.ಪಿ ಕಾಲೇಜಿನ ನಿವೃತ ಪ್ರಾಂಶುಪಾಲರಾದ ಮಾಳಗೆ ಬಾಬುರಾವ್ ರವರು ಮಾತನಾಡಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ, ಹಾಗೂ ಗಿಡ ಮರಗಳು ಖುದ್ದಾಗಿ ಗಾಳಿ ಕೊಟ್ಟು ನಮ್ಮ ಅರೋಗ್ಯ ಕಾಪಾಡುತ್ತದೆ. ಅದದರಿಂದ ಪ್ರತಿಯೊಬ್ಬರು ಪರಿಸರ ನೈರ್ಮಲ್ಯ ಕಾಪಾಡಬೇಕೆಂದು ಮನವಿ ಮಾಡುತ್ತೇನೆ ಎಂದು ಹೇಳಿದರು, ಈ ಸಂಧರ್ಬದಲ್ಲಿ ಮಂಗಲಾ.ಬಿ ಮಾಳಗೆ ಅಧ್ಯಕ್ಷೆ ಕೀರ್ತಿ ಮಹಿಳಾ ಅಬಿವೃದ್ಧಿ ಸಂಘ ನಿಟ್ಟೂರ್ (ಬಿ) ರವರು ಕಾರ್ಯಕ್ರಮದಲ್ಲಿ ಭಾಗಿಯಾದ ಮಹಿಳೆಯರಿಗೆ ಸಸಿ ನೀಡುವ ಮೂಲಕ ಧನ್ಯವಾದಗಳು ತಿಳಿಸಿದರು, ಈ ಸಂಧರ್ಬದಲ್ಲಿ ಉಷಾ ಅಂಬರೀಶ್ ಮಾಳಗೆ, ಕಾರ್ಯದರ್ಶಿ, ಕೀರ್ತಿ ಮಹಿಳಾ ಅಭಿವೃದ್ಧಿ ಸಂಘ ನಿಟ್ಟೂರ್ (ಬಿ) ಹಾಗೂ ಅರ್ಚನಾ ಯಲ್ಲಾಲ್ಲಿoಗ, ಕಾಶಿನಾಥ ಚಿಕಪೇಟ್ ಧರ್ಮಸ್ಥಳ, ಫರ್ಜಾನ ಮೇಡಮ್,ಮತ್ತು ವಿವಿಧ ಸ್ವಸಹಾಯ ಸಂಘ ಸದಸ್ಯರು ಮತ್ತು ಮಹಿಳೆಯರು ಭಾಗಿಯಾಗಿದ್ದರು.
ವರದಿ : ಪ್ರದೀಪ್ ಕುಮಾರ್ ದಾದನೂರ್